alex Certify ರೈಲು ಹಳಿ ದಾಟುವ ಮುನ್ನ ಯೋಚಿಸುವಂತೆ ಮಾಡುತ್ತೆ ಎದೆ ಝಲ್‌ ಎನ್ನಿಸುವ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಹಳಿ ದಾಟುವ ಮುನ್ನ ಯೋಚಿಸುವಂತೆ ಮಾಡುತ್ತೆ ಎದೆ ಝಲ್‌ ಎನ್ನಿಸುವ ಈ ವಿಡಿಯೋ

ದೇಶದಲ್ಲಿ ರೈಲು ಹಳಿಯ ಮೇಲೆ ಪ್ರತಿ ವರ್ಷ ಸಾವಿರಾರು ಮಂದಿ ಸಾವಿಗೀಡಾಗುತ್ತಾರೆ. ಆದರೂ ಜನ ಪಾಠ ಕಲಿಯುವಂತೆ ಕಾಣಿಸುತ್ತಿಲ್ಲ.

ಇದೀಗ ವೈರಲ್​ ಆಗಿರುವ ರೈಲ್ವೆ ಹಳಿಯೊಂದರ ಮೇಲೆ ನಡೆದ ಘಟನೆಯ ವಿಡಿಯೋ ಎದೆ ಝಲ್​ ಎನಿಸುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೊದಲ್ಲಿ ಪ್ರಯಾಣಿಕರು ಸಾವಿಗೆ ಅತೀ ಸಮೀಪ ಹೋಗಿಬಂದಂತೆ ಭಾಸವಾಗುತ್ತದೆ. ಒಂದು ರೈಲಿನಿಂದ ಇಳಿದಿರುವ ಪ್ರಯಾಣಿಕರು ಇನ್ನೊಂದು ಹಳಿಯಲ್ಲಿ ರೈಲು ಬರುವ ಕೆಲವೇ ಸೆಕೆಂಡುಗಳ ಮೊದಲು ರೈಲ್ವೆ ಹಳಿ ದಾಟುತ್ತಿರುವುದನ್ನು ನೋಡಬಹುದು.

ನಡು ಮಾರ್ಗದಲ್ಲಿ ರೈಲು ನಿಂತಂತೆ ಕಾಣಿಸುತ್ತದೆ. ಆದರೂ ಅನೇಕ ಪ್ರಯಾಣಿಕರು ಆ ರೈಲಿನಿಂದ ಇಳಿದು ಅಡ್ಡ ದಾರಿಯಲ್ಲಿ ರಸ್ತೆ ಮಾರ್ಗದತ್ತ ಹೊರಟಿರುತ್ತಾರೆ. ಇವರ ಪೈಕಿ ಮಹಿಳೆ ಮತ್ತು ಅವರ ಕುಟುಂಬ ಹಳಿ ದಾಟಲು ಪ್ರಯತ್ನಿಸಿದರು.

ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ವ್ಯಕ್ತಿ ಪಕ್ಕದ ಟ್ರಾಕ್​ನ ಮೂಲಕ ರೈಲು ಸಮೀಪಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು, ಅವರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಅವರು ಟ್ರಾಕ್​ನ ಇನ್ನೊಂದು ಬದಿಗೆ ಸಾಮಾನುಗಳನ್ನು ಎಸೆಯಲು ಪ್ರಾರಂಭಿಸಿದ್ದು, ಅಷ್ಟರಲ್ಲೇ ರೈಲು ವೇಗವಾಗಿ ಸಮೀಪಿಸಿತ್ತು. ಕೂದಲೆಳೆ ಅಂತರದಲ್ಲಿ ಅವರೆಲ್ಲ ಪಾರಾಗುತ್ತಾರೆ.

ಐಎಎಸ್​ ಅಧಿಕಾರಿ ಅವನೀಶ್​ ಶರಣ್​ ಮಿಲಿಯನ್​ ಡಾಲರ್​ ಸಲಹೆಯೊಂದಿಗೆ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಟ್ವಿಟ್ಟರ್​‌ನಲ್ಲಿ ಶೇರ್​ ಮಾಡಲಾಗಿದ್ದ ವಿಡಿಯೋವನ್ನು 1 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ.

ನೆಟ್ಟಿಗರು ಇಂತಹ ಅಜಾಗರೂಕ ವರ್ತನೆಯನ್ನು ಖಂಡಿಸಿದ್ದು, ಅಲ್ಲಿ ಕಾಣಿಸಿದ ಪ್ರಯಾಣಿಕರನ್ನು, ಮತ್ತು ವಿಶೇಷವಾಗಿ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...