ರೈಲು ಹತ್ತುವಾಗಲೇ ಕಾಲು ಜಾರಿ ಬಿದ್ದು ತಂದೆ, ಮಗ ಮೃತಪಟ್ಟಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ 78 ವರ್ಷದ ಮೋಹನ್ ಪ್ರಸಾದ್ ಹಾಗೂ ಅವರ ಪುತ್ರ 38 ವರ್ಷದ ಅಮರನಾಥ್ ಮೃತರು.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಬೆಂಗಳೂರಿಗೆ ತೆರಳುವ ಸಲುವಾಗಿ ತಂದೆ ಮಗ ತಾಳಗುಪ್ಪ – ಬೆಂಗಳೂರು – ಮೈಸೂರು ರೈಲು ಹತ್ತುವಾಗ ಮೊದಲು ಮಗ ರಾಜೇಂದ್ರ ಪ್ರಸಾದ್ ಕಾಲು ಜಾರಿ ಬಿದ್ದಿದ್ದಾರೆ.
ಅವರನ್ನು ರಕ್ಷಿಸಲು ಮೋಹನ್ ಪ್ರಸಾದ್ ಮುಂದಾಗಿದ್ದು ಈ ವೇಳೆ ಅವರೂ ಸಹ ಫ್ಲಾಟ್ ಫಾರಂ ಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಗ ಅಮರ್ ನಾಥ್ ಸ್ಥಳದಲ್ಲೇ ಮೃತಪಟ್ಟರೆ, ಮೋಹನ್ ಪ್ರಸಾದ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾರೆ.