ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಪರಿಷ್ಕೃತಗೊಂಡಿರುವ ರೈಲು ವೇಳಾಪಟ್ಟಿಯು ಇಂದಿನಿಂದ ಜಾರಿಗೆ ಬರಲಿದ್ದು, ಇದನ್ನು ರೈಲ್ವೆ ಇಲಾಖೆಯ ವೆಬ್ ಸೈಟ್ ನಲ್ಲಿ ‘ಟ್ರೈನ್ಸ್ ಎಟ್ ಎ ಗ್ಲಾನ್ಸ್’ ಶೀರ್ಷಿಕೆಯಡಿ ಪ್ರಕಟಿಸಲಾಗಿದೆ.
ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಗಾಂಧಿನಗರದಲ್ಲಿ ಮೂರನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿದ್ದು, ಇದೂ ಸೇರಿದಂತೆ 2021-22ನೇ ಸಾಲಿನಲ್ಲಿ ರೈಲ್ವೆ ಇಲಾಖೆ 106 ಹೊಸ ಸೇವೆಗಳನ್ನು ಆರಂಭಿಸಿದೆ.
ಜೊತೆಗೆ 26 ರೈಲುಗಳ ಸೇವೆಯನ್ನು ವಿಸ್ತರಿಸಲಾಗಿದ್ದು, ಅಲ್ಲದೆ 24 ರೈಲುಗಳ ಸಂಚಾರವನ್ನೂ ಹೆಚ್ಚಿಸಲಾಗಿದೆ. ಇವುಗಳೆಲ್ಲದರ ವೇಳೆಯನ್ನು ಪರಿಷ್ಕೃತ ವೇಳಾಪಟ್ಟಿಯಲ್ಲಿ ಪ್ರಕಟಿಸಲಾಗುತ್ತಿದ್ದು, ಜೊತೆಗೆ ಐಆರ್ಸಿಟಿಸಿ ವೆಬ್ ಸೈಟ್ ನಲ್ಲಿ ಟಿಎಜಿ ಇ ಬುಕ್ ಕೂಡ ಲಭ್ಯವಿದ್ದು, ಪ್ರಯಾಣಿಕರು ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.