ರೈಲು ಎಲ್ಲ ವರ್ಗದ ಜನರ ಕೈಗೆಟಕುವ ಸಂಚಾರ ವಿಧಾನವಾಗಿದೆ. ದೂರದ ಊರಿಗೆ ಕಡಿಮೆ ಬಜೆಟ್ ಹಾಗೂ ಆರಾಮಾಗಿ ಪ್ರಯಾಣಿಸಬೇಕು ಅಂದ್ರೆ ಎಲ್ಲರೂ ಮೊದಲು ರೈಲಿಗೇನೇ ಪ್ರಾಮುಖ್ಯತೆ ಕೊಡುತ್ತಾರೆ. ರೈಲಿನಲ್ಲಿ ಪ್ರಯಾಣ ಅಂದರೆ ಸಾಕು ಜನರು ಕೊಂಚ ಹೆಚ್ಚು ಲಗೇಜ್ ತೆಗೆದುಕೊಂಡು ಹೋಗೋದು ಸಾಮಾನ್ಯ. ಆದರೆ ಇನ್ಮುಂದೆ ಎಷ್ಟು ಬೇಕೋ ಅಷ್ಟು ಲಗೇಜ್ ತೆಗೆದುಕೊಂಡು ಹೋಗೋ ಹಾಗೆ ಇಲ್ಲ.. ಯಾಕಂದ್ರೆ ರೈಲ್ವೆ ಇಲಾಖೆ ಈಗ ಹೊಸದೊಂದು ನಿಯಮವನ್ನ ಜಾರಿ ಮಾಡಿದೆ.
ಇನ್ನು ಮುಂದೆ ರೈಲಿನಲ್ಲಿ ಹೆಚ್ಚು ಲಗೇಜ್ ಕೊಂಡೊಯ್ಯುವುದಕ್ಕೆ ಹೆಚ್ಚಿನ ಹಣ ತೆರಬೇಕಾಗುತ್ತೆ. ಅಷ್ಟೆ ಅಲ್ಲ ಹೆಚ್ಚುವರಿ ಲಗೇಜ್ ಕುರಿತು ಮೊದಲೇ ಪಾರ್ಸಲ್ ಕಚೇರಿಗೆ ಹೋಗಿ ಲಗೇಜ್ ಬುಕ್ ಮಾಡಬೇಕು. ಕೆಲ ಮೂಲಗಳ ಪ್ರಕಾರ ರೈಲು ಚಲಿಸುತ್ತಿರುವಾಗಲೇ, ಕಿಡಿಗೇಡಿ ಚೈನ್ ಎಳೆಯುತ್ತಿರುತ್ತಾರೆ. ಇದರಿಂದ ಉಳಿದ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಹಾಗೂ ದಾರಿ ಮಧ್ಯೆಯೇ ಹೆಚ್ಚುವರಿ ಲಗೇಜ್ಗಳನ್ನ ಬೇಕು ಬೇಕೆಂದಲ್ಲಿ ಇಳಿಸಿಕೊಳ್ಳುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಕೊಡುವುದಕ್ಕಂತಾನೇ ಹೆಚ್ಚುವರಿ ಲಗೇಜ್ ಮೇಲೆ ಶುಲ್ಕ ಕಟ್ಟುವ ನಿಯಮವನ್ನ ರೈಲ್ವೆ ಇಲಾಖೆ ಜಾರಿ ಮಾಡಿದೆ.
BIG NEWS: ಶಾಸಕನ ಪುತ್ರ ಸೇರಿ ಐವರಿಂದ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್; ಕಾರಿನಲ್ಲಿ ಪೈಶಾಚಿಕ ಕೃತ್ಯ
ರೈಲಿನಲ್ಲಿ ಪ್ರಯಾಣಿಸುವಾಗ ಸಾಮಾನು ಸರಂಜಾಮು ಕೊಂಡೊಯ್ಯಲು ಮಿತಿ ಇದೆ. ಆದರೂ ಪ್ರಯಾಣಿಕರು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಲಗೇಜ್ನ್ನ ತೆಗೆದುಕೊಂಡು ಹೋಗುತ್ತಾರೆ. ಇದರಿಂದ ಬೇರೆ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಕೆಲ ಮಾಹಿತಿ ಪ್ರಕಾರ ವಿಮಾನಕ್ಕಿಂತಲೂ ಹೆಚ್ಚಿನ ಲಗೇಜ್ನ್ನ ರೈಲಿನಲ್ಲಿ ಕೊಂಡೊಯ್ಯಲಾಗುತ್ತಿದೆ. ಹಾಗಾಗಿ ಇದಕ್ಕೆ ಕಡಿವಾಣ ಹಾಕುವುದಕ್ಕಂತಾನೇ ಈಗ ಹೆಚ್ಚುವರಿ ಲಗೇಜ್ ಮೇಲೆ ಸೇವಾ ಶುಲ್ಕ ವಿಧಿಸುವ ಕ್ರಮ ಜಾರಿಗೆ ತರಲಾಗುತ್ತಿದೆ.
ಮೇ 29ರಂದು ರೈಲ್ವೆ ಸಚಿವಾಲಯ ತನ್ನ ಟ್ವಿಟರ್ ಅಕೌಂಟ್ನಲ್ಲಿ ಈ ಕುರಿತು ಸಂದೇಶ ಕೂಡ ಕೊಟ್ಟಿತ್ತು. ಪ್ರಯಾಣದ ಸಮಯದಲ್ಲಿ ಹೆಚ್ಚುವರಿ ಲಗೇಜ್ನೊಂದಿಗೆ ಪ್ರಯಾಣಿಸದಂತೆ ಸಲಹೆ ಕೊಟ್ಟಿತ್ತು. ಲಗೇಜ್ ಹೆಚ್ಚು ಇದ್ದಷ್ಟು ಪ್ರಯಾಣ ಕಷ್ಟ ಅಂತ ಕೂಡಾ ಹೇಳಿತ್ತು. ಹೆಚ್ಚು ಲಗೇಜ್ ಇಟ್ಟುಕೊಂಡು ಪ್ರಯಾಣಿಸಬೇಡಿ ಹೆಚ್ಚು ಲಗೇಜ್ ಒಯ್ಯುವುದು ಅನಿವಾರ್ಯ ಆಗಿದ್ದರೆ ಪಾರ್ಸಲ್ ಕಚೇರಿಗೆ ಹೋಗಿ ಲಗೇಜ್ ಬುಕ್ ಮಾಡಿ ಎಂದು ಸಚಿವಾಲಯ ಟ್ವೀಟ್ ಮಾಡಿತ್ತು.
ರೈಲ್ವೆ ನಿಯಮಗಳ ಪ್ರಕಾರ ರೈಲು ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು 40ರಿಂದ 70 ಕೆಜಿಯಷ್ಟು ಲಗೇಜ್ ಮಾತ್ರ ಸಾಗಿಸಬಹುದು. ರೈಲ್ವೇಯ ಕೋಚ್ಗೆ ಅನುಗುಣವಾಗಿ ಅನುಮತಿಸುವ ಲಗೇಜ್ ತೂಕದ ಪ್ರಮಾಣವೂ ಕೂಡಾ ಬೇರೆ ಬೇರೆಯಾಗಿರುತ್ತೆ. ಸ್ಲೀಪರ್, ಎಸಿ ಚೇರ್ ಕಾರ್, ಮತ್ತು ಎಸಿ 3ಟೈಯರ್ ಕೋಚ್ಗಳಲ್ಲಿ ಪ್ರಯಾಣಿಕರು 40 ಕೆ.ಜಿಯವರೆಗೂ ಸಾಗಿಸಬಹುದು. 2ನೇ ಎಸಿಕೋಚ್ಗಳಲ್ಲಿ ಪ್ರಯಾಣಿಕರು 50 ಕೆ.ಜಿ. ಮತ್ತು 1ನೇ ಎಸಿ ದರ್ಜೆಯ ಪ್ರಯಾಣಿಕರು 70ಕೆಜಿಯವರೆಗೂ ಲಗೇಜ್ ಸಾಗಿಸಬಹುದು. ಸಾಮಾನ್ಯ ವರ್ಗದಲ್ಲಿ ಈ ಮಿತಿ ಕೇವಲ 35ಕೆ.ಜಿ ಮಾತ್ರ.
ಈ ನಿಯಮವನ್ನ ಮೀರಿಯೂ ಯಾರಾದರೂ ಹೆಚ್ಚುವರಿ ಲಗೇಜ್ ತೆಗೆದುಕೊಂಡು ಹೋಗಿದ್ದು ಕಂಡು ಬಂದಿದ್ದೇ ಆದರೆ ದಂಡ ವಿಧಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.