ವಾರದ ಹಿಂದಷ್ಟೇ ರೈಲು ಪ್ರಯಾಣಿಕರಿಗೆ ಗುಣಮಟ್ಟದ ಆಹಾರ ನೀಡಲು ಹಾಗೂ ರೈಲು 2 ಗಂಟೆ ವಿಳಂಬವಾದರೆ ಪ್ರಯಾಣಿಕರಿಗೆ ಅಲ್ಲಿಯೇ ಉಚಿತ ಆಹಾರ ನೀಡಲು ಕ್ರಮ ಕೈಗೊಂಡಿದ್ದ ರೈಲ್ವೆ ಇಲಾಖೆ ಈಗ ಮತ್ತೊಂದು ಗುಡ್ ನ್ಯೂಸ್ ನೀಡಿದೆ.
ಎಸಿ ಎಕಾನಮಿ ಕ್ಲಾಸ್ ಕೋಚ್ ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಹಾಸಿಗೆ ಸೌಲಭ್ಯವನ್ನು ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಸೆಪ್ಟೆಂಬರ್ 20 ರಿಂದಲೇ ಇದು ಜಾರಿಗೆ ಬರಲಿದೆ. ಎಂದಿನಂತೆ ಸಾಮಾನ್ಯ ದರವೇ ಇರಲಿದೆ.
ಕೋವಿಡ್ ಸಂದರ್ಭದಲ್ಲಿ ಹಾಸಿಗೆ ಸೌಲಭ್ಯಗಳನ್ನು ರೈಲ್ವೆ ಇಲಾಖೆ ನಿಲ್ಲಿಸಿದ್ದು, ಇದೀಗ ಮತ್ತೆ ಆರಂಭಿಸಿದೆ. ಜೊತೆಗೆ ಈ ಸೌಲಭ್ಯವನ್ನು ಎಸಿ ಎಕಾನಮಿ ಕ್ಲಾಸ್ ಪ್ರಯಾಣಿಕರಿಗೂ ಸಿಗಲು ಕ್ರಮ ಕೈಗೊಳ್ಳಲಾಗಿದೆ.