
ರೈಲು ಪ್ರಯಾಣದ ಸಂದರ್ಭದಲ್ಲಿ ಪುಟ್ಟ ಮಕ್ಕಳಿಗೆ ಟಿಕೆಟ್ ಬುಕ್ಕಿಂಗ್ ಮಾಡಬೇಕೋ ಬೇಡವೋ? ಹಾಫ್ ಟಿಕೆಟ್ಟೋ ಅಥವಾ ಫುಲ್ಲೋ ಎಂಬೆಲ್ಲಾ ಗೊಂದಲ ಸಹಜ. ಭಾರತೀಯ ರೈಲ್ವೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮುಂಗಡ ಟಿಕೆಟ್‌ಗಳನ್ನು ಕಾಯ್ದಿರಿಸದಿದ್ದರೆ ದಂಡ ವಿಧಿಸುವುದಿಲ್ಲ. ಆದ್ರೆ ಪುಟ್ಟ ಮಕ್ಕಳಿಗಾಗಿ ಈಗ ವಿಶೇಷ ಆಸನ ವ್ಯವಸ್ಥೆ ಮಾಡಲಾಗಿದೆ. IRCTC ಮಕ್ಕಳ ಟಿಕೆಟ್ ಬುಕಿಂಗ್ ನಿಯಮಗಳನ್ನು ಸಹ ಬದಲಾಯಿಸಿದೆ.
IRCTC ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ 1-5 ವರ್ಷ ವಯಸ್ಸಿನ ಮಕ್ಕಳಿಗೆ ಪ್ರತ್ಯೇಕ ಬರ್ತ್ ಬೇಕಾಗಿದ್ದಲ್ಲಿ ಪೂರ್ಣ ಶುಲ್ಕವನ್ನು ಪಾವತಿಸಬೇಕು. ಬರ್ತ್ ಬೇಡ ಎಂದಾದಲ್ಲಿ ಮಕ್ಕಳು ಉಚಿತವಾಗಿ ಪ್ರಯಾಣ ಮಾಡಬಹುದು. 2020ರ ಸುತ್ತೋಲೆ ಪ್ರಕಾರ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪ್ರಯಾಣಿಸಲು ಮೀಸಲಾತಿ ಅಗತ್ಯವಿಲ್ಲ. ಉಚಿತವಾಗಿ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಬಹುದು.
ಆದಾಗ್ಯೂ, ಬರ್ತ್ ಅಗತ್ಯವಿದ್ದರೆ, ಟಿಕೆಟ್ ಬುಕ್ ಮಾಡುವ ಮೂಲಕ ಪೂರ್ಣ ವಯಸ್ಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಭಾರತೀಯ ರೈಲ್ವೆ ಇತ್ತೀಚೆಗೆ ಲಕ್ನೋ ಮೇಲ್‌ನ ಎಸಿ ಮೂರನೇ ಬೋಗಿಯಲ್ಲಿ ಬೇಬಿ ಬರ್ತ್‌ಗಳನ್ನು ಸೇರಿಸಿದೆ. ಇದು ಪ್ರಯಾಣಿಕರ ಮೆಚ್ಚುಗೆಗೆ ಕಾರಣವಾಗಿದೆ. ಇದುವರೆಗೆ 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಟಿಕೆಟ್‌ಗೆ ಅವಕಾಶವಿತ್ತು. ನೀವು 5-11 ವರ್ಷದೊಳಗಿನ ಮಗುವಿಗೆ ಪೂರ್ಣ ಬರ್ತ್ ತೆಗೆದುಕೊಳ್ಳುತ್ತಿದ್ದರೆ, ಪೂರ್ತಿ ಶುಲ್ಕ ಪಾವತಿಸಬೇಕು. ಪೂರ್ತಿ ಬರ್ತ್ ತೆಗೆದುಕೊಳ್ಳದಿದ್ದರೆ ಟಿಕೆಟ್ ದರದ ಅರ್ಧದಷ್ಟು ಮಾತ್ರ ಪಾವತಿಸಬೇಕಾಗುತ್ತದೆ. ಆದರೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬರ್ತ್ ತೆಗೆದುಕೊಳ್ಳದಿರುವ ಯಾವುದೇ ಆಯ್ಕೆಯನ್ನು ಅಳವಡಿಸಿಲ್ಲ.
ವಯಸ್ಸು 0-4 ವರ್ಷಗಳು: ಶಿಶುವಿನ ಬರ್ತ್ / ಬರ್ತ್ ಬೇಡ ಎಂಬುದನ್ನು ಆಯ್ಕೆ ಮಾಡಬೇಕು. ಬರ್ತ್ ಬೇಡ ಎಂದಿದ್ದರೆ ಮಕ್ಕಳಿಗೆ ಪ್ರಯಾಣ ಉಚಿತ. ಬರ್ತ್ ತೆಗೆದುಕೊಂಡರೆ ಸಂಪೂರ್ಣ ಶುಲ್ಕ ವತಿಸಿ.
ವಯಸ್ಸು 5-11 ವರ್ಷಗಳು: ನೀವು ಸಂಪೂರ್ಣ ಬರ್ತ್ ಅನ್ನು ಆಯ್ಕೆ ಮಾಡಿದರೆ ಪೂರ್ಣ ಶುಲ್ಕ ಪಾವತಿಸಬೇಕು. ಬರ್ತ್ ಇಲ್ಲದ ಮಕ್ಕಳ ಆಸನವನ್ನು ಆಯ್ಕೆ ಮಾಡಿದರೆ ಅರ್ಧ ಬೆಲೆ.
ವಯಸ್ಸು 12 ವರ್ಷಗಳು: ಎಲ್ಲರಿಗೂ ಪೂರ್ಣ ಶುಲ್ಕ. ಟಿಕೆಟ್ ಕಾಯ್ದಿರಿಸಲು ಬಯಸುವ ಪ್ರಯಾಣಿಕರು, ರೈಲು ಟಿಕೆಟ್‌ನಲ್ಲಿ ಸಂಪೂರ್ಣ ರಿಯಾಯಿತಿ ಪಡೆಯಲು ಶಿಶುಗಳ ಆಸನದೊಂದಿಗೆ ರೈಲು ಬರ್ತ್ ಅನ್ನು ಕಾಯ್ದಿರಿಸಬೇಕು. ಈ ಬಗ್ಗೆ ಯಾವುದೇ ಔಪಚಾರಿಕ ಪ್ರಕಟಣೆಯನ್ನು ಮಾಡಿಲ್ಲವಾದರೂ, IRCTC ವೆಬ್‌ಸೈಟ್‌ನಲ್ಲಿ ಹೊಸ ಟಿಕೆಟ್ ನಿಯಮಗಳನ್ನು ಈಗಾಗಲೇ ಅನ್ವಯಿಸಲಾಗಿದೆ.