ರೈಲು ಪ್ರಯಾಣಿಕರಿಗೆ ಒಳ್ಳೆಯ ಸುದ್ದಿಯೊಂದಿದೆ. IRCTCಯ ಆಹಾರ ವಿತರಣಾ ಸೇವೆ ಝೂಪ್, ಪ್ರಯಾಣಿಕರಿಗೆ ರೈಲುಗಳಲ್ಲಿ ಹೆಚ್ಚು ಅನುಕೂಲಕರ ಸೇವೆಗಳನ್ನು ಒದಗಿಸಲು Jio Hapik ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ರೈಲಿನಲ್ಲಿ ಪ್ರಯಾಣಿಸುವ ವೇಳೆ ಪ್ರಯಾಣಿಕರು ವಾಟ್ಸಾಪ್ ಚಾಟ್‌ಬಾಟ್ ಸೇವೆಯನ್ನು ಬಳಸಿಕೊಂಡು ತಿನಿಸುಗಳನ್ನು ಆರ್ಡರ್ ಮಾಡಬಹುದು.
ಪ್ರಯಾಣದ ಸಮಯದಲ್ಲಿ ಪಿಎನ್‌ಆರ್ ಸಂಖ್ಯೆಯನ್ನು ಬಳಸಿಕೊಂಡು ಅವರಿಗೆ ಬೇಕಾದ ತಿನಿಸುಗಳನ್ನು ನೇರವಾಗಿ ಅವರು ಕುಳಿತಲ್ಲಿಯೇ ತಲುಪಿಸಲು ಇದು ಅನುವು ಮಾಡಿಕೊಡುತ್ತದೆ. ಝೂಪ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡದೆಯೇ, ಮುಂಬರುವ ಯಾವುದೇ ನಿಲ್ದಾಣದಲ್ಲಿ ಆಹಾರವನ್ನು ಪಡೆದುಕೊಳ್ಳಲು ಈ ಸೇವೆಯು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುತ್ತದೆ.
ಇದಕ್ಕಾಗಿ ಹೆಚ್ಚುವರಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿಲ್ಲ. ಬೇಕಾದಾಗ ತಿನಿಸುಗಳನ್ನು ಆರ್ಡರ್ ಮಾಡಲು ಝೂಪ್ ಅನ್ನು ಬಳಸಬಹದು. ಅಷ್ಟೇ ಅಲ್ಲ ಫುಡ್ ಡೆಲಿವರಿಯನ್ನು ನೈಜ ಸಮಯದಲ್ಲಿ ಟ್ರ್ಯಾಕಿಂಗ್ ಕೂಡ ಮಾಡಬಹುದು. ತಿನಿಸುಗಳ ಬಗ್ಗೆ ಪ್ರತಿಕ್ರಿಯೆ ನೀಡಬಹುದು ಮತ್ತು ಆರ್ಡರ್‌ಗಳಿಗೆ ಸಂಬಂಧಿಸಿದಂತೆ ಸಪೋರ್ಟ್ ಕೂಡ ಪಡೆದುಕೊಳ್ಳಬಹುದು.
IRCTC ಝೂಪ್ ಫುಡ್ ಡೆಲಿವರಿ ಅಪ್ಲಿಕೇಶನ್: ಬಳಕೆ ಹೇಗೆ ?
Haptik ನ ಸುಧಾರಿತ ಸಂವಾದಾತ್ಮಕ ವಾಣಿಜ್ಯ ಸಾಮರ್ಥ್ಯಗಳ ಬೆಂಬಲದೊಂದಿಗೆ, WhatsApp ಚಾಟ್‌ಬಾಟ್ ವೈಶಿಷ್ಟ್ಯವು ರೈಲಿನ ಮೂಲಕ ಪ್ರಯಾಣಿಸುವಾಗ ಆಹಾರವನ್ನು ಆರ್ಡರ್ ಮಾಡುವ ಲಭ್ಯತೆಯನ್ನು ವಿಸ್ತರಿಸುತ್ತದೆ. ಪ್ರಯಾಣಿಕರು ವಾಟ್ಸಾಪ್ ಚಾಟ್ +91 7042062070 ನಲ್ಲಿ ಜೂಪ್ ಅನ್ನು ಸಂಪರ್ಕಿಸಬಹುದು.
ನೈಜ-ಸಮಯದ ಸೇವೆ ಪ್ರಯಾಣಿಕರು ಎದುರಿಸುವ ನೆಟ್‌ವರ್ಕ್ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ವಾಟ್ಸಾಪ್ ಚಾಟ್‌ಬಾಟ್ ಮೂಲಕ ಆರ್ಡರ್‌ಗಳನ್ನು ಮಾಡಲು ಮತ್ತು ಆಯಾ ಆಸನಗಳಿಗೆ ಆಹಾರವನ್ನು ತಲುಪಿಸಲು ಅನುವು ಮಾಡಿಕೊಡುತ್ತದೆ. ಯೋಜಿತ ರೈಲು ನಿಲ್ದಾಣಗಳಲ್ಲಿ ಆಯ್ದ ರೆಸ್ಟೋರೆಂಟ್‌ಗಳಿಂದ ಆಹಾರವನ್ನು ಆರ್ಡರ್ ಮಾಡಲು ಪ್ರಯಾಣಿಕರು ತಮ್ಮ PNR ಸಂಖ್ಯೆಯನ್ನು ಬಳಸಬೇಕಾಗುತ್ತದೆ. ಅವರು ಪ್ರತಿಕ್ರಿಯೆ, ಟಿಪ್ಪಣಿಯನ್ನು ಮಾಡಬಹುದು. ಯಾವುದೇ ಸಮಸ್ಯೆಯಾದಲ್ಲಿ ಸಪೋರ್ಟ್ ಪಡೆಬಹುದು.
IRCTC ಝೂಪ್ ಫುಡ್ ಡೆಲಿವರಿ ಅಪ್ಲಿಕೇಶನ್: ಪಾವತಿ ವಿಧಾನ
ಝೂಪ್ ಫುಡ್ ಡೆಲಿವರಿ ಅಪ್ಲಿಕೇಶನ್‌ನಲ್ಲಿ UPI, ನೆಟ್‌ಬ್ಯಾಂಕಿಂಗ್ ಮೂಲಕ ಡಿಜಿಟಲ್ ಪಾವತಿ ಮಾಡಬಹುದು. WhatsApp ಪೇಮೆಂಟ್ ಇನ್ನೂ ಸಕ್ರಿಯವಾಗದ ಕಾರಣ ಅದನ್ನು ಬಳಸುವುದು ಅಸಾಧ್ಯ. ಪ್ರಯಾಣಿಕರು UPI ಮೂಲಕ ಡಿಜಿಟಲ್ ಪಾವತಿಗಳನ್ನು ಮಾಡಬಹುದು ಮತ್ತು ಇತರ ವಿಧಾನಗಳನ್ನು ಬಳಸಿ ನೆಟ್ ಬ್ಯಾಂಕಿಂಗ್ ಮೂಲಕವೂ ಹಣ ಪಾವತಿಸಬಹುದು.
IRCTC ಝೂಪ್ ಫುಡ್ ಡೆಲಿವರಿ ಅಪ್ಲಿಕೇಶನ್: ಫುಡ್ ಆರ್ಡರ್ ಮಾಡುವುದು ಹೇಗೆ ?
ಫುಡ್ ಆರ್ಡರ್ ಮಾಡಲು ಪ್ರಯಾಣಿಕರು ತಮ್ಮ ಸ್ವಂತ WhatsApp ಸಂಖ್ಯೆಯನ್ನು ಬಳಸಿಕೊಂಡು +91 7042062070 ಗೆ Zoop WhatsApp ಚಾಟ್‌ಬಾಟ್‌ಗೆ ಮೆಸೇಜ್ ಕಳುಹಿಸಬೇಕಾಗುತ್ತದೆ. ನೀವು ಸಂಖ್ಯೆಯನ್ನು ಸೇವ್ ಮಾಡಿಕೊಂಡು ಅದರಲ್ಲಿ ಒದಗಿಸಲಾದ ವಿವಿಧ ಸೇವೆಗಳಿಗಾಗಿ ಚಾಟ್ ಮಾಡಬಹುದು. ನಂತರ ಚಾಟ್‌ಬಾಟ್ ನಿಮ್ಮ ರೈಲಿನ ಸೀಟಿನಲ್ಲಿ ಆಹಾರವನ್ನು ಆರ್ಡರ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಗತ್ಯ ವಿವರಗಳನ್ನು ಕೇಳುತ್ತದೆ.
Zoop ಚಾಟ್‌ಬಾಟ್ ರೆಸ್ಟೋರೆಂಟ್ ಅನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಅದರಲ್ಲಿದೆ. ನಿಮಗೆ ಬೇಕಾದ ತಿನಿಸನ್ನು ಆರ್ಡರ್ ಮಾಡುವುದು ಮತ್ತು ಹಣ ಪಾವತಿಸುವುದು ಎಲ್ಲವನ್ನೂ ಈ ಅಪ್ಲಿಕೇಶನ್‌ನಿಂದಲೇ ಮಾಡಬಹುದು. ವಹಿವಾಟು ಪೂರ್ಣಗೊಂಡ ನಂತರ, ನೀವು ಚಾಟ್‌ಬಾಕ್ಸ್‌ನಿಂದ ನಿಮ್ಮ ಆಹಾರವನ್ನು ಟ್ರ್ಯಾಕ್ ಮಾಡಬಹುದು. ಮುಂದಿನ ನಿಲ್ದಾಣಕ್ಕೆ ರೈಲು ಬಂದಾಗ ತಿನಿಸು ನಿಮಗಾಗಿ ಕಾಯುತ್ತಿರುತ್ತದೆ.