ಪ್ರತಿದಿನ ಭಾರತದಲ್ಲಿ ಲಕ್ಷಗಟ್ಟಲೆ ಜನರು ರೈಲ್ವೇ ಮೂಲಕ ಪ್ರಯಾಣಿಸುತ್ತಾರೆ. ಇದು ಸುರಕ್ಷಿತ ಮತ್ತು ಅನುಕೂಲಕರ ಪ್ರಯಾಣವಾಗಿದೆ. ದೂರದ ರೈಲು ಪ್ರಯಾಣಕ್ಕೆ ಮುಂಗಡ ಟಿಕೆಟ್ ಕಾಯ್ದಿರಿಸುವುದು ಉತ್ತಮ. ಕೆಲವೊಮ್ಮೆ ಹಠಾತ್ ಪ್ಲಾನ್ ಬದಲಾವಣೆಯಿಂದಾಗಿ, ಟಿಕೆಟ್ ಅನ್ನು ರದ್ದುಗೊಳಿಸಬೇಕಾಗಿ ಬರುತ್ತದೆ. ಹಾಗಾಗಿ ರೈಲು ಟಿಕೆಟ್‌ನ ರದ್ದತಿ, ಮರುಪಾವತಿ ಮತ್ತು ಇತರ ನಿಯಮಗಳ ಬಗ್ಗೆ ತಿಳಿದಿರಬೇಕು.
ರೈಲು ಟಿಕೆಟ್ ರದ್ದು ಮಾಡಿದರೆ ಎಷ್ಟು ಮರುಪಾವತಿ ನೀಡಲಾಗುತ್ತದೆ ? ಎಷ್ಟು ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ ? ಅದರ ಪ್ರಕ್ರಿಯೆ ಏನು ಎಂಬುದನ್ನೆಲ್ಲ ತಿಳಿದುಕೊಳ್ಳುವುದರಿಂದ ನಷ್ಟವನ್ನು ತಪ್ಪಿಸಬಹುದು. ಆನ್‌ಲೈನ್ ರೈಲು ಟಿಕೆಟ್ ಬುಕಿಂಗ್ ಮಾಡಿದ್ದರೆ ಮತ್ತು ನೀವು ಅದನ್ನು ರದ್ದುಗೊಳಿಸಿದರೆ, ಅದನ್ನು ನಿಮ್ಮ ಖಾತೆಗೆ ಕಳುಹಿಸಲಾಗುತ್ತದೆ. IRCTCಯು ಬಳಕೆದಾರರ ಖಾತೆಗೆ ಡಿಜಿಟಲ್ ರೀತಿಯಲ್ಲಿ ಹಣವನ್ನು ಕಳುಹಿಸುತ್ತದೆ. ಆದರೆ ಕೆಲವು ನಿರ್ದಿಷ್ಟ ಟಿಕೆಟ್‌ಗಳನ್ನು ರದ್ದುಗೊಳಿಸಿದಾಗ ಹಣ ಮರುಪಾವತಿಯನ್ನು ದೊರೆಯುವುದಿಲ್ಲ.
ಯಾವ ರೀತಿಯ ಟಿಕೆಟ್‌ನಲ್ಲಿ ಮರುಪಾವತಿ ಲಭ್ಯವಿಲ್ಲ ?
ರೈಲು ಟಿಕೆಟ್ ಕನ್ಫರ್ಮ್ ಆದ ಬಳಿಕ ಅದನ್ನು ರದ್ದುಗೊಳಿಸುವಾಗ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಟಿಕೆಟ್ ರದ್ದುಗೊಳಿಸಿದಾಗ, ರೈಲ್ವೆಯ ನಿಯಮಗಳ ಪ್ರಕಾರ ನಿಮಗೆ ಮರುಪಾವತಿ ನೀಡಲಾಗುತ್ತದೆ. ನಿಗದಿತ ನಿರ್ಗಮನಕ್ಕೆ 4 ಗಂಟೆಗಳ ಮೊದಲು ಟಿಕೆಟ್ ರದ್ದುಗೊಳಿಸಿದರೆ ಮಾತ್ರ ಮರುಪಾವತಿ ನೀಡಲಾಗುತ್ತದೆ.
ಚಾರ್ಟ್ ಸಿದ್ಧಪಡಿಸಿದ ನಂತರ ಟಿಕೆಟ್ ರದ್ದುಗೊಳಿಸಿದರೂ ಮರುಪಾವತಿ ನೀಡಲಾಗುವುದಿಲ್ಲ. ರೈಲು ಹೊರಡುವ 30 ನಿಮಿಷಗಳ ಮೊದಲು ಟಿಕೆಟ್ ರದ್ದುಗೊಳಿಸಿದರೆ, ಸ್ಲೀಪರ್ ಕ್ಲಾಸ್‌ನಲ್ಲಿ 60 ರೂ. ರದ್ದತಿ ಶುಲ್ಕ ವಿಧಿಸಲಾಗುತ್ತದೆ. ನೀವು ಎಸಿ ಕ್ಲಾಸ್ ಟಿಕೆಟ್ ಅನ್ನು ರದ್ದುಗೊಳಿಸಿದರೆ 65 ರೂ. ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಈ ಟಿಕೆಟ್ ಅನ್ನು 4 ಗಂಟೆಗಳ ಮುಂಚಿತವಾಗಿ ರದ್ದುಗೊಳಿಸಿದರೆ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.