alex Certify ರೈಲಿನ ಇಂಜಿನ್​‌ ಅನ್ನೇ‌ ಮಾರಾಟ ಮಾಡಿದ ಭೂಪ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನ ಇಂಜಿನ್​‌ ಅನ್ನೇ‌ ಮಾರಾಟ ಮಾಡಿದ ಭೂಪ….!

ನಕಲಿ ದಾಖಲೆಗಳನ್ನು ಸೃಷ್ಟಿಸಿದ ರೈಲ್ವೆ ಇಲಾಖೆಯ ಇಂಜಿನಿಯರ್​ ಒಬ್ಬರು ರೈಲ್ವೆ ಇಂಜಿನ್​ನ್ನೇ ಮಾರಾಟ ಮಾಡಿದ ಶಾಕಿಂಗ್​ ಘಟನೆಯು ಬಿಹಾರದಲ್ಲಿ ವರದಿಯಾಗಿದೆ. ಸಮಸ್ತಿಪುರದ ಲೋಕೋ ಡೀಸೆಲ್​ ಶೆಡ್​ನಲ್ಲಿ ಉದ್ಯೋಗಿಯಾಗಿರುವ ರಾಜೀವ್​ ರಂಜನ್​ ಝಾ ಎಂಬ ಹೆಸರಿನ ಇಂಜಿನಿಯರ್​ ಪುರ್ನಿಯಾ ಕೋರ್ಟ್ ಸ್ಟೇಷನ್​ನಲ್ಲಿರುವ ಹಳೆಯ ಸ್ಟೀಮ್​ ಇಂಜಿನ್​ನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

ರೈಲ್ವೆ ಇಲಾಖೆಯ ಇಂಜಿನಿಯರ್​ಗಳು, ಭದ್ರತಾ ಸಿಬ್ಬಂದಿ ಹಾಗೂ ರೈಲ್ವೆ ನಿಲ್ದಾಣದ ಅಧಿಕಾರಿಗಳು ಇಂಜಿನಿಯರ್​ನ ಕಳ್ಳಾಟವನ್ನು ಬಯಲಿಗೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಇಂಜಿನಿಯರ್​ ಫ್ಯಾಬ್ರಿಕೇಟೆಡ್​​ ಡಿಎಂಐ ಪೇಪರ್ ​ವರ್ಕ್​ ರಚಿಸಿ ರೈಲ್ವೆ ಇಂಜಿನ್​ನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಡಿಸೆಂಬರ್​ 14ರಂದು ಅಕ್ರಮವಾಗಿ ರೈಲ್ವೆ ಇಂಜಿನ್​ನ್ನು ಮಾರಾಟ ಮಾಡಲಾಗಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ. ಈ ಘಟನೆ ನಡೆದು ಎರಡು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಭಾನುವಾರ ಪುರ್ನಿಯಾ ಕೋರ್ಟ್​ ಸ್ಟೇಷನ್​ ಔಟ್​ಪೋಸ್ಟ್​ ಇನ್ ಚಾರ್ಜ್​ ಎಂಎಂ ರೆಹಮಾನ್​ ಸಲ್ಲಿಸಿದ ಅರ್ಜಿಯನ್ನು ಆಧರಿಸಿ ಬನ್ಮಾಂಕಿ ಆರ್​​ಪಿಎಫ್​​ ಪೋಸ್ಟ್​ನಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ.

ಗ್ಯಾಸ್​ ಕಟರ್​ ಬಳಕೆ ಮಾಡಿ ರೈಲಿನ ಇಂಜಿನ್​ನ್ನು ತೆಗೆಯುತ್ತಿದ್ದ ವೇಳೆ ಇದನ್ನು ಪ್ರಭಾರಿ ಅಧಿಕಾರಿಯೊಬ್ಬರು ವೀಕ್ಷಿಸಿದ್ದಾರೆ. ಈ ವೇಳೆಯಲ್ಲಿ ಕಳ್ಳ ಇಂಜಿನಿಯರ್​ಗೆ ಸಹಾಯ ಮಾಡಲು ಸುಶೀಲ್​ ಎಂಬ ಹೆಸರಿನ ವ್ಯಕ್ತಿ ಕೂಡ ಇದ್ದ ಎನ್ನಲಾಗಿದೆ.

ಕಾಮಗಾರಿಯನ್ನು ಈ ಕೂಡಲೇ ನಿಲ್ಲಿಸುವಂತೆ ಪ್ರಭಾರಿ ಅಧಿಕಾರಿ ಹೇಳಿದರೂ ಸಹ ಇಂಜಿನಿಯರ್​ ನಕಲಿ ದಾಖಲೆಗಳನ್ನು ತೋರಿಸಿ ಇಂಜಿನ್​ನ್ನು ಡೀಸೆಲ್​ ಶೆಡ್​ಗೆ ಕಳುಹಿಸಬೇಕು ಎಂದು ನಂಬಿಸಿದ್ದರು ಎನ್ನಲಾಗಿದೆ. ಹೆಚ್ಚಿನ ತನಿಖೆಯ ವೇಳೆ ಇಂಜಿನಿಯರ್​ ಕಳ್ಳಾಟ ಬೆಳಕಿಗೆ ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...