ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುವಾಗ ದಣಿವಾಗೋದು ಸಾಮಾನ್ಯ. ಬಹುತೇಕ ಮಂದಿ ಬಸ್, ಮೆಟ್ರೋದಲ್ಲಿ ಪ್ರಯಾಣಿಸುವಾಗ ನಿದ್ರಿಸುತ್ತಾರೆ. ದಣಿದ ವ್ಯಕ್ತಿಯೊಬ್ಬರು ಸಂಜೆ ಕೆಲಸದಿಂದ ಮನೆಗೆ ಹೋಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಇದು ಲೋಕಲ್ ರೈಲಿನ ಸೀಟಿನ ಮೇಲೆ ಕುಳಿತಿರುವಾಗ ದೊಡ್ಡ ಹೊಟ್ಟೆಯ ವ್ಯಕ್ತಿಯೊಬ್ಬರು ನಿದ್ರಿಸುತ್ತಿರುವುದನ್ನು ತೋರಿಸುತ್ತದೆ. ಕೆಂಪು ಟಿ-ಶರ್ಟ್ ಧರಿಸಿರುವ ವ್ಯಕ್ತಿಯು ಕೆಳಗೆ ಬೀಳುತ್ತಿದ್ದರೂ ಅರಿವಾಗದೆ ಆಳವಾದ ನಿದ್ರೆಯಲ್ಲಿದ್ದಂತೆ ತೋರುತ್ತದೆ.
ಭಾರಿ ನಿದ್ರೆಯಲ್ಲಿದ್ದ ಆ ವ್ಯಕ್ತಿ ಧೊಪ್ಪನೆ ಕೆಳಗೆ ಬಿದ್ದೇ ಬಿಟ್ಟಿದ್ದಾರೆ. ಕೆಲವು ಸೆಕೆಂಡುಗಳ ನಂತರ, ತನ್ನ ಆಸನದಿಂದ ಕೆಳಗೆ ಬಿದ್ದ ಕೂಡಲೇ ಎಚ್ಚರಗೊಂಡಿದ್ದಾನೆ. ಆ ವ್ಯಕ್ತಿ ಕೆಳ ಬೀಳುತ್ತಿದ್ದಂತೆ ಸಹ ಪ್ರಯಾಣಿಕರು ಏನಾಯಿತು ಎಂಬಂತೆ ನೋಡಿದ್ದಾರೆ.
ಸದ್ಯ, ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋ ವೈರಲ್ ಆಗಿದ್ದು, ಪೋಸ್ಟ್‌ಗೆ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್‌ಗಳು ಬಂದಿವೆ. ನೆಟ್ಟಿಗರು ನಗುವ ಎಮೋಜಿಗಳು ಮತ್ತು ತಮಾಷೆಯ ಪ್ರತಿಕ್ರಿಯೆಗಳೊಂದಿಗೆ ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ.
https://youtu.be/Kb16sfhuflI