ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಮಹತ್ವದ ಮಾಹಿತಿಯಿದೆ. ರೈಲ್ವೆ ಇಲಾಖೆಯು ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಇದರಿಂದ ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಲಾಭವಾಗಲಿದೆ. ಹಿರಿಯ ನಾಗರಿಕರು ಸೇರಿದಂತೆ ಹಲವು ವರ್ಗಗಳಿಗೆ ಹೊಸ ನಿಯಮಗಳನ್ನು ಜಾರಿ ಮಾಡಲಾಗಿದೆ. ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಅಪರಾಧಗಳನ್ನು ತಡೆಯಲು ರೈಲ್ವೆ ಇಲಾಖೆ ಕಾಲಕಾಲಕ್ಕೆ ಹೊಸ ನಿಯಮಗಳನ್ನು ರೂಪಿಸುತ್ತದೆ.
ಕಳೆದ ವರ್ಷ ಮಹಿಳೆಯರ ವಿರುದ್ಧದ ದೌರ್ಜನ್ಯ, ಅಪರಾಧದ ಘಟನೆಗಳ ಡೇಟಾಬೇಸ್ ರಚಿಸಲು ರೈಲ್ವೆ ಭದ್ರತಾ ಪಡೆ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ. ಮಹಿಳಾ ಬೋಗಿಗಳ ಮೇಲೆ ತೀವ್ರ ನಿಗಾ ಇರಿಸಲು ರೈಲ್ವೆ ಅಧಿಕಾರಿಗಳು ಆದೇಶಿಸಿದ್ದಾರೆ. ಇದರೊಂದಿಗೆ ಇತರ ಬೋಗಿಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯ ಬಗ್ಗೆಯೂ ಸಂಪೂರ್ಣ ಗಮನ ಹರಿಸಲಾಗುವುದು. ಶಂಕಿತರ ಮೇಲೆ ನಿಗಾ ಇಡಲಾಗುತ್ತದೆ ಜೊತೆಗೆ ಆಗಾಗ್ಗೆ ಸೂಕ್ಷ್ಮ ಸ್ಥಳಗಳಿಗೆ ಭದ್ರತಾ ಸಿಬ್ಬಂದಿ ಭೇಟಿ ನೀಡುತ್ತಾರೆ.
ಗುರುತಿನ ಚೀಟಿ ಇಲ್ಲದೆ ಯಾವುದೇ ಉದ್ಯೋಗಿ ರೈಲುಗಳು ಮತ್ತು ರೈಲ್ವೆ ಆವರಣಗಳನ್ನು ಪ್ರವೇಶಿಸಲು ಅನುಮತಿಸುವುದಿಲ್ಲ. ಉಚಿತ ವೈಫೈ ಇಂಟರ್‌ನೆಟ್ ಸೇವೆಗಳ ಮೂಲಕ ಪೋರ್ನ್ ವೀಕ್ಷಿಸುವವರ ಮೇಲೆ ತೀವ್ರ ನಿಗಾ ಇರಿಸುವಂತೆ ಇಲಾಖೆ ಆದೇಶ ಹೊರಡಿಸಿದೆ. ಯಾರ್ಡ್‌ಗಳು ಅಥವಾ ನಿಲ್ದಾಣಗಳ ಬಳಿಯಿರುವ ಅನಗತ್ಯ ಪೊದೆಗಳು, ಗಿಡಗಳನ್ನು ತೆರವು ಮಾಡಲಾಗುತ್ತದೆ. ಏಕೆಂದರೆ ಪೊದೆಗಳ ಮರೆಯಲ್ಲಿ ಸಮಾಜ ವಿರೋಧಿ ಕೃತ್ಯಗಳು ನಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದಲ್ಲದೇ ಕಂಟ್ರೋಲ್ ರೂಂನಲ್ಲಿ ಸಿಸಿಟಿವಿ ದೃಶ್ಯಗಳ ಮೇಲೂ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಲಿದ್ದಾರೆ.