
ಇಂದು ಆಷಾಡ ಮಾಸ ಆರಂಭವಾಗುವ ಮುನ್ನದ ಅಮವಾಸ್ಯೆ. ಈ ದಿನವನ್ನು ರೈತ ಸಮುದಾಯ ‘ಮಣ್ಣೆತ್ತಿನ ಅಮಾವಾಸ್ಯೆ’ ಯನ್ನಾಗಿ ಆಚರಿಸಲೆಂದು ಇದಕ್ಕಾಗಿ ಕುಂಬಾರರ ಮನೆಯಿಂದ ಮಣ್ಣಿನಿಂದ ಮಾಡಿದ ಎತ್ತುಗಳನ್ನು ತಂದು ಪೂಜಿಸಲಾಗುತ್ತದೆ.
ಅಲ್ಲದೆ ಈ ದಿನದಂದು ವಿಶೇಷ ಅಡುಗೆ ತಯಾರಿಸಿ ನೈವೇದ್ಯ ಮಾಡಿದ ಬಳಿಕ ಕುಟುಂಬದೊಂದಿಗೆ ಭೋಜನ ಮಾಡಲಾಗುತ್ತದೆ. ಕೃಷಿಯಲ್ಲಿ ಎತ್ತುಗಳ ಪಾತ್ರ ಮಹತ್ವದ್ದಾಗಿರುವ ಕಾರಣ ರೈತರು ಈ ದಿನದಂದು ಅವುಗಳನ್ನು ಭಕ್ತಿಭಾವದಿಂದ ಪೂಜಿಸುತ್ತಾರೆ.
ಮಣ್ಣೆತ್ತಿನ ಅಮಾವಾಸ್ಯೆ ದಿನದಂದು ರೈತರು ಕೃಷಿ ಕಾರ್ಯಗಳಿಗೆ ಬಿಡುವು ನೀಡಲಿದ್ದು, ಎತ್ತುಗಳಿಗೂ ವಿಶ್ರಾಂತಿ ನೀಡುತ್ತಾರೆ. ಆಧುನಿಕತೆಯ ಹೆಸರಿನಲ್ಲಿ ಸಂಪ್ರದಾಯಗಳು ಮರೆಯಾಗುತ್ತಿರುವ ಮಧ್ಯೆ ರಾಜ್ಯದ ಕೆಲವು ಭಾಗದಲ್ಲಿ ಇದು ಇಂದಿಗೂ ನಡೆದುಕೊಂಡು ಬರುತ್ತಿರುವುದು ವಿಶೇಷ.
