ಕೃಷಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಮತ್ತು ಇಂಧನ ವೆಚ್ಚದ ಭಾರ ಕಡಿಮೆ ಮಾಡಲು ರಾಜ್ಯ ಸರ್ಕಾರ, ಪ್ರತಿ ಎಕರೆಗೆ 250 ರೂಪಾಯಿಗಳಂತೆ ಗರಿಷ್ಠ ಐದು ಎಕರೆಗೆ 1,250 ರ ವರೆಗೆ ನೇರ ನಗದು ವರ್ಗಾವಣೆ ಮೂಲಕ ಡೀಸೆಲ್ ಗೆ ಸಹಾಯಧನ ನೀಡುತ್ತದೆ.
ರೈತಶಕ್ತಿ ಯೋಜನೆಯಲ್ಲಿ ಈ ಸಹಾಯಧನ ಲಭ್ಯವಾಗಲಿದ್ದು, ಕೃಷಿ ಇಲಾಖೆ ಮೂಲಕ ಈ ಸೌಲಭ್ಯ ಪಡೆಯಬಹುದಾಗಿದೆ. ಬಹು ಮುಖ್ಯವಾಗಿ ಈ ಸೌಲಭ್ಯ ಪಡೆಯಲು ರೈತರು ಫ್ರೂಟ್ಸ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಬೇಕಾಗಿದೆ.
ಒಂದೊಮ್ಮೆ ಫ್ರೂಟ್ಸ್ ಪೋರ್ಟಲ್ ನಲ್ಲಿ ಹೆಸರು ನೋಂದಾವಣೆ ಮಾಡಿಸಿರದಿದ್ದರೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಖಾತೆ, ಪಹಣಿ ವಿವರ ಮತ್ತು ಜಾತಿ ಪ್ರಮಾಣ ಪತ್ರದೊಂದಿಗೆ ಆಗಸ್ಟ್ 20ರ ಒಳಗೆ ತಮ್ಮ ಹೆಸರು ಸೇರಿಸಬಹುದಾಗಿದೆ.