ಬೆಂಗಳೂರು: ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಕೇಂದ್ರ ಸರ್ಕಾರದ ನಡೆ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ನಮ್ಮ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸಿದೆ. ನಮ್ಮದು ಸ್ಪಂದನಾಶೀಲ ಸರ್ಕಾರ ಎಂದು ಹೇಳಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆ ವಾಪಸ್ ಎಂಬುದು ಸತ್ಯಕ್ಕೆ ದೂರವಾದದ್ದು.
ಹಾಡಹಗಲೇ ಮಹಿಳೆ ಮೇಲೆ ಜೆಸಿಬಿ ಹತ್ತಿಸಿ ಕೊಲೆಗೆ ಯತ್ನ..! ವೈರಲ್ ಆಯ್ತು ಬೆಚ್ಚಿ ಬೀಳಿಸುವ ವಿಡಿಯೋ
ಈ ಹಿಂದಿನ ವ್ಯವಸ್ಥೆಯಡಿಯಲ್ಲಿಯೇ ರೈತರು ಮುಂದುವರೆಯಲು ನಿರ್ಧರಿಸಿದ್ದಾರೆ. ಈ ತೀರ್ಮಾನದಿಂದ ಸರ್ಕಾರ ಮಣಿದಿಲ್ಲ. ಅನ್ನದಾತನ ಕೂಗಿಗೆ ಸ್ಪಂದಿಸಿದ್ದೇವೆ. ಮಸೂದೆ ಬಗ್ಗೆ ಇನ್ನೊಂದು ಸಲ ಚರ್ಚೆಯಾಗಬೇಕು. ಮಸೂದೆ ಹಿಂಪಡೆದರೆ ವಿಶ್ವಾಸ ಬರುತ್ತೆ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.