ತೀರ್ಥಹಳ್ಳಿ: ರೈತರಿಗೆ ಭತ್ತದ ಬಿತ್ತನೆ ಬೀಜಗಳಾದ ಅಭಿಲಾಶ್, ಇ ಐ ಟಿ -13901 (ತುಂಗಾ ದೀರ್ಘಾವಧಿ ತಳಿ), ಎಂ ಟಿ ಯು -1001 (ಮಧ್ಯಮಾವಧಿ ತಳಿ), ಜೆ ಜಿ ಎಲ್ -1798, ಆರ್ ಎನ್ ಆರ್ -15048 (ಅಲ್ಪಾವಧಿ ತಳಿ) ರಿಯಾಯಿತಿ ದರಗಳಲ್ಲಿ ದೊರೆಯಲಿದೆ.
ಆಸಕ್ತ ರೈತರು ಇದನ್ನು ಪಡೆಯಬಹುದಾಗಿದ್ದು, ಆದರೆ ಬಿತ್ತನೆ ಬೀಜ ಪಡೆಯಲು ಫ್ರೂಟ್ ತಂತ್ರಾಂಶದಲ್ಲಿ ರೈತರ ಹೆಸರು ನೋಂದಣಿ ಮಾಡುವುದು ಕಡ್ಡಾಯವಾಗಿದೆ.
ಒಂದೊಮ್ಮೆ ಫ್ರೂಟ್ ತಂತ್ರಾಂಶದಲ್ಲಿ ಹೆಸರು ನೋಂದಣಿ ಮಾಡಿಸಿರದಿದ್ದರೆ ಅಂತಹ ರೈತರು ಜಮೀನು ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ತೀರ್ಥಹಳ್ಳಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.