ತೀರ್ಥಹಳ್ಳಿ: ರೈತರಿಗೆ ಮುಖ್ಯ ಮಾಹಿತಿಯೊಂದು ಇಲ್ಲಿದೆ. ಮುಂಗಾರು ಹಂಗಾಮು ಆರಂಭವಾದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ವತಿಯಿಂದ ಭತ್ತದ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ.
ಭತ್ತದ ಬೀಜಗಳಾದ ಅಭಿಲಾಶ್ (ದೀರ್ಘಾವಧಿ ತಳಿ), ಎಂಟಿಯು -1001, ಉಮ (ಮಧ್ಯಮ ಅವಧಿ ತಳಿ), ಆರ್ ಎನ್ ಆರ್ 15048 (ಅಲ್ಪಾವಧಿ ತಳಿ) ರಿಯಾಯಿತಿ ದರದಲ್ಲಿ ಸಿಗಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪಡೆಯಬಯಸುವ ರೈತರು ಫ್ರೂಟ್ ತಂತ್ರಾಂಶದಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದ್ದು, ಹೆಚ್ಚಿನ ವಿವರಗಳಿಗೆ ರೈತ ಸಂಪರ್ಕ ಕೇಂದ್ರ ಸಂಪರ್ಕಿಸುವಂತೆ ತಿಳಿಸಲಾಗಿದೆ.