ಬೆಳಗಾವಿ: ಅತ್ಯಾಚಾರ ತಡೆಯಲಾಗದಿದ್ದರೆ ಮಲಗಿ ಆನಂದಿಸಿ ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ಇದೀಗ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ರಮೇಶ್ ಕುಮಾರ್ ಹೇಳಿಕೆ ವಿರುದ್ಧ ಬಿಜೆಪಿ ಮಹಿಳಾ ಶಾಸಕಿಯರು ಪ್ರತಿಭಟನೆಗೆ ಮುಂದಾಗಿದ್ದಾರೆ.
ನಿನ್ನೆ ವಿಧಾನಸಭೆಯಲ್ಲಿ ಮಾತನಾಡಿದ್ದ ಶಾಸಕ ರಮೇಶ್ ಕುಮಾರ್, ಒಂದು ಹೇಳಿಕೆ ಇದೆ.. ಅತ್ಯಾಚಾರದಿಂದ ತಪ್ಪಿಸಿಕೊಳ್ಳಲಾಗದ ಸಂದರ್ಭ ಇದ್ದಾಗ ಮಲಗಿ ಎಂಜಾಯ್ ಮಾಡಿ ಎಂಬ ಹೇಳಿಕೆ ಇದೆ ಎಂದಿದ್ದರು. ರಮೇಶ್ ಕುಮಾರ್ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದಂತೆ ಟ್ವಿಟರ್ ನಲ್ಲಿ ಕ್ಷಮೆಯಾಚಿಸಿದ್ದ ಮಾಜಿ ಸ್ಪೀಕರ್ ಇನ್ಮುಂದೆ ಇಂಥಹ ಹೇಳಿಕೆ ನೀಡಲ್ಲ, ಎಚ್ಚರಿಕೆಯಿಂದ ಮಾತನಾಡುತ್ತೇನೆ. ಹೇಳಿಕೆಗೆ ಕ್ಷಮೆ ಇರಲಿ ಎಂದಿದ್ದರು.
ಟ್ರಾನ್ಸ್ಫರೆಂಟ್ ಡ್ರೆಸ್ ನಲ್ಲಿ ಮಿಂಚಿದ ಪ್ರಿಯಾಂಕಾ…..! ಅಭಿಮಾನಿಗಳು ಶಾಕ್
ರಮೇಶ್ ಕುಮಾರ್ ಕ್ಷಮೆಯಾಚಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿರುವ ಬಿಜೆಪಿ ಸಚಿವೆ ಶಶಿಕಲಾ ಜೊಲ್ಲೆ, ಮಹಿಳೆಯರನ್ನು ಇವರು ಯಾವರೀತಿ ನೋಡುತ್ತಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲಿಯೂ ತಾಯಿ ಅಕ್ಕ, ತಂಗಿ, ಹೆಂಡತಿಯಾಗಿ ಎಲ್ಲ ಕಡೆಯಲ್ಲೂ ಹೆಣ್ಣು ಮಗಳಿದ್ದಾಳೆ. ಪುರುಷರಿಗೆ ಸರಿ ಸಮಾನವಾಗಿ ಹೆಜ್ಜೆ ಇಡುತ್ತಿದ್ದೇವೆ ಇಂಥ ಆಧುನಿಕ ಸಮಾಜದಲ್ಲಿ ಅದರಲ್ಲೂ ಇಂತ ಮನಸ್ಥಿತಿಯ ಪುರುಷರೊಂದಿಗೆ ನಾವು ಬದುಕುತ್ತಿದ್ದೇವೆ ಎಂದರೆ ಮಹಿಳೆಯರಿಗೆ ಎಷ್ಟರ ಮಟ್ಟಿಗೆ ರಕ್ಷಣೆ ಇದೆ ಎಂಬುದನ್ನು ಹೇಳಬೇಕು. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಯಿ ಕೂಡ ಮಾತನಾಡಲಿ ಮಹಿಳೆಯರಿಗೆ ರಕ್ಷಣೆ ನೀಡಲಿ ಎಂದು ಆಗ್ರಹಿಸಿದ್ದಾರೆ.,
ರಮೇಶ್ ಕುಮಾರ್ ಮನೆಯಲ್ಲಿ ಕೂಡ ಹೆಣ್ಮಕ್ಕಳಿದ್ದಾರೆ ಎಂಬುದನ್ನು ಗಮನದಲ್ಲಿರಲಿ. ಓರ್ವ ಮಾಜಿ ಸ್ಪೀಕರ್, ಜನಪ್ರತಿನಿಧಿ, ಬುದ್ಧಿವಂತರೆನಿಸಿಕೊಂಡವರು ಹೆಣ್ಮಕ್ಕಳ ಬಗ್ಗೆ ಇಂಥ ಕೀಳುಮಟ್ಟದ ಮಾತನಾಡುತ್ತಿದ್ದಾರೆ ಎಂದರ ಅವರ ಮನಸ್ಥಿತಿ ಏನೆಂಬುದು ಅರ್ಥವಾಗುತ್ತೆ. ರಮೇಶ್ ಕುಮಾರ್ ಹೇಳಿಕೆ ಖಂಡಿಸಿ ಬಿಜೆಪಿ ಶಾಸಕಿಯರು ಕಪ್ಪುಪಟ್ಟಿ ಧರಿಸಿ ಸದನದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ವಿಧಾನಸಭೆಯಲ್ಲಿ ರಮೇಶ್ ಕುಮಾರ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.