ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ತಮ್ಮ 2023 ಪ್ಲಾನರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಖುದ್ದು ಸಾರಾ ಈ ಪ್ಲಾನರ್ ಸಿದ್ಧಪಡಿಸಿದ್ದಾರಂತೆ. ಸುಂದರವಾದ ಡೈರಿಯಲ್ಲಿ ಏನೇನಿದೆ ಅನ್ನೋ ಕುತೂಹಲ ಈಗ ನೆಟ್ಟಿಗರಲ್ಲಿ ಶುರುವಾಗಿದೆ.
2023ರಲ್ಲಿ ಸಾರಾ ಏನೇನೆಲ್ಲಾ ಪ್ಲಾನ್ ಹಾಕಿಕೊಂಡಿದ್ದಾರೆ? ಸಚಿನ್ ಪುತ್ರಿಯ ಮದುವೆ ಪ್ಲಾನ್ ಕೂಡ ಅದರಲ್ಲಿ ಇರಬಹುದಾ ಅನ್ನೋದು ಎಲ್ಲರ ಪ್ರಶ್ನೆ. ಸಾರಾ ತೆಂಡೂಲ್ಕರ್ ಇನ್‌ಸ್ಟಾಗ್ರಾಮ್ನಲ್ಲಿ ಮಾಡಿರೋ ಪೋಸ್ಟ್ ಈಗ ವೈರಲ್ ಆಗಿದೆ. 2023ರ ಪ್ಲಾನರ್ ಬಗ್ಗೆ ತಾನು ಸಿಕ್ಕಾಪಟ್ಟೆ ಉತ್ಸುಕವಾಗಿದ್ದೇನೆ ಅಂತಾನೂ ಸಾರಾ ಬರೆದುಕೊಂಡಿದ್ದಾರೆ. ಪ್ಲಾನರ್ ಖರೀದಿ ಮಾಡುವುದಕ್ಕಿಂತ ಸ್ವಂತವಾಗಿ ತಯಾರಿಸಿರೋದು ಆಕೆಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆಯಂತೆ.
ಈ ಪ್ಲಾನರ್ ಮೂಲಕ ಸಾರಾ ತೆಂಡೂಲ್ಕರ್ ಸ್ಟಾರ್ಟಪ್ ಜಗತ್ತಿಗೆ ಕಾಲಿಟ್ಟಿದ್ದಾರೆ. ಇದು ಸೀಮಿತ ಆವೃತ್ತಿಯಾಗಿದ್ದು, ಇದರಲ್ಲಿ ಸಾರಾಳ ಕೈ ಬರಹದ ಟಿಪ್ಪಣಿಗಳಿವೆ. ಸಾರಾ ತೆಂಡೂಲ್ಕರ್ ಡಾಟ್ ಇನ್ ಎಂಬ ವೆಬ್ ಸೈಟ್ ಕೂಡ ರಚಿಸಿದ್ದಾರೆ. ಈ ವೆಬ್‌ಸೈಟ್‌ನಲ್ಲಿ ಪ್ಲಾನರ್ ರೂಪದಲ್ಲಿ ಡೈರಿ ಲಭ್ಯವಿದೆ, ಇದರ ಬೆಲೆ 2499 ರೂಪಾಯಿ.
ಕಪ್ಪು ಬಣ್ಣದ ಈ ಡೈರಿ ತುಂಬಾ ಸರಳವಾಗಿ ಕಾಣುತ್ತದೆ. ಅದರ ಮೇಲೆ 2023 ಎಂದು ಬರೆಯಲಾಗಿದೆ. ಇನ್‌ಸ್ಟಾ ವೀಡಿಯೊದಲ್ಲಿ ಸಾರಾ ತಮ್ಮ ಪ್ಲಾನರ್ ಡೈರಿಯಲ್ಲಿ ಬರೆಯುತ್ತಿರುವುದನ್ನು ನೋಡಬಹುದು. ಕೆಲವರು ಈ ಪ್ಲಾನರ್ ಅನ್ನು ಮೆಚ್ಚಿಕೊಂಡಿದ್ದರೆ ಇನ್ನು ಕೆಲವರು ಬಲು ದುಬಾರಿಯಾಯ್ತು ಎಂದು ಕಮೆಂಟ್ ಮಾಡಿದ್ದಾರೆ.