ಹಣ್ಣುಗಳ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸೀತಾಫಲ ಕೂಡ ಬಹಳ ರುಚಿಕರ ಹಣ್ಣು. ಸೀತಾಫಲ, ರುಚಿ ಜೊತೆ ಆರೋಗ್ಯಕ್ಕೂ ಬಹಳ ಒಳ್ಳೆಯದು. ಸೀತಾಫಲ ಸೇವನೆಯಿಂದ ಸಾಕಷ್ಟು ಲಾಭಗಳಿವೆ. ಸೀತಾಫಲದಲ್ಲಿ ಎ, ಸಿ, ಬಿ2 ವಿಟಮಿನ್ ಸಾಕಷ್ಟು ಪ್ರಮಾಣದಲ್ಲಿದೆ. ನಿಯಮಿತ ರೂಪದಲ್ಲಿ ಸೀತಾಫಲ ಸೇವನೆಯಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು.
ಸೀತಾಫಲ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಗುಣವಿರುತ್ತದೆ. ಇದು ದೇಹದಲ್ಲಿರುವ ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ. ಕ್ಯಾನ್ಸರ್ ನಂತಹ ಅಪಾಯಕಾರಿ ರೋಗದಿಂದಲೂ ಮುಕ್ತಿ ಪಡೆಯಬಹುದಾಗಿದೆ.
ಸೀತಾಫಲದಲ್ಲಿರುವ ಕ್ಯಾಲೋರಿ ಶುಗರ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸೀತಾಫಲ ಸೇವನೆಯಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಬಹುಬೇಗ ಹಸಿವಾಗುವುದಿಲ್ಲ. ತೂಕ ಇಳಿಯುತ್ತದೆ.
ಹಣ್ಣಿನಲ್ಲಿ ಕಬ್ಬಿಣದ ಅಂಶ ಹೆಚ್ಚಿರುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ತಡೆದು ಸಂದಿ ನೋವನ್ನು ಕಡಿಮೆ ಮಾಡುತ್ತದೆ.
ನಿಯಮಿತ ರೂಪದಲ್ಲಿ ಸೀತಾಫಲ ಸೇವನೆ ಮಾಡುವುದ್ರಿಂದ ಅದ್ರಲ್ಲಿರುವ ಮೆಗ್ನೀಷಿಯಮ್ ಮತ್ತು ಕ್ಯಾಲ್ಸಿಯಂ ನಮ್ಮ ಎಲುಬನ್ನು ಬಲಪಡಿಸುತ್ತದೆ.