ಕ್ಯಾರೆಟ್ ಹಲ್ವಾ ರುಚಿ ಎಲ್ಲರೂ ನೋಡಿರುತ್ತೀರಿ. ಅದೇ ಕ್ಯಾರೆಟ್ ಹಲ್ವಾದ ರುಚಿ ಇನ್ನಷ್ಟು ಹೆಚ್ಚಬೇಕೆಂದರೆ ಮಿಲ್ಕ್ ಮೇಡ್ ಬಳಸಬೇಕು. ಈ ಮಿಲ್ಕ್ ಮೇಡ್ ಉಪಯೋಗಿಸಿ ಹೇಗೆ ಕ್ಯಾರೆಟ್ ಹಲ್ವಾ ತಯಾರಿಸಬೇಕು ಅನ್ನುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಕ್ಯಾರೆಟ್ – 1 ಕೆಜಿ
ಹಾಲು – 1/2 ಕಪ್
ತುಪ್ಪ – 1/2 ಕಪ್
ಮಿಲ್ಕ್ ಮೇಡ್ – 400 ಗ್ರಾಂ
ಏಲಕ್ಕಿ ಪುಡಿ – 1/2 ಟೀ ಚಮಚ
ಗೋಡಂಬಿ, ಬಾದಾಮಿ ಅಲಂಕಾರಕ್ಕೆ
ಮಾಡುವ ವಿಧಾನ
ಕ್ಯಾರೆಟ್ ನ್ನು ತುರಿದುಕೊಂಡು ಒಂದು ದಪ್ಪ ತಳದ ಬಾಣಲೆಯಲ್ಲಿ ಹಾಕಿ ಕೊಳ್ಳಬೇಕು. ಸ್ವಲ್ಪ ತುಪ್ಪ ಹಾಕಿ ಕ್ಯಾರೆಟನ್ನು ಬಾಡಿಸಿಕೊಳ್ಳಿ. ನಂತರ ಹಾಲನ್ನು ಹಾಕಿ ಮಿಶ್ರಣ ಮಾಡಿ. ಬಾಣಲೆನ್ನು ಮುಚ್ಚಿ ಸ್ವಲ್ಪ ಹೊತ್ತು ಬೇಯಿಸಿ. ಹಾಲು ಪೂರ್ತಿ ಆರಿದ ಬಳಿಕ ಮಿಲ್ಕ್ ಮೇಡ್ ಹಾಕಿ ಮಿಶ್ರಣ ಮಾಡಿ. ಮಿಶ್ರಣ ಗಟ್ಟಿಯಾಗುವವರೆಗೂ ಕೈಯಾಡಿಸುತ್ತಿರಬೇಕು. ಪೂರ್ತಿ ಗಟ್ಟಿಯಾದ ನಂತರ ಏಲಕ್ಕಿ ಪುಡಿ, ಗೋಡಂಬಿ, ಬಾದಾಮಿ ಚೂರುಗಳನ್ನು ಹಾಕಿ ಅಲಂಕಾರ ಮಾಡಿ. ಈಗ ಬಿಸಿಬಿಸಿಯಾದ ಮಿಲ್ಕ್ ಮೇಡ್ ಕ್ಯಾರೆಟ್ ಹಲ್ವಾ ಸವಿಯಲು ನೀಡಿ.