ಹಣ್ಣುಗಳ ರಾಜ ಮಾವಿನ ಹಣ್ಣಿನ ರುಚಿಗೆ ಮನಸೋಲದವರು ಯಾರಿದ್ದಾರೆ ಹೇಳಿ. ಸೀಜನ್ ನಲ್ಲಿ ಮಾವಿನ ಹಣ್ಣನ್ನು ತಿನ್ನದವರೇ ಇಲ್ಲವೆನ್ನಬಹುದು. ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರಿಗೂ ಮಾವಿನ ಹಣ್ಣು ಕಂಡರೆ ಸಾಕು, ತಿನ್ನಬೇಕೆನಿಸುತ್ತದೆ.
ಇಂತಹ ಮಾವಿನ ಹಣ್ಣಿನಿಂದ ಪಾಯಸ ಮಾಡಬಹುದಾಗಿದ್ದು, ಅದರ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
6 ಮಾವಿನ ಹಣ್ಣು, 250 ಗ್ರಾಂ ಬೆಲ್ಲ, 1 ಕಾಯಿ ತೆಂಗಿನ ತುರಿ, 2 ಚಮಚ ಏಲಕ್ಕಿ ಪುಡಿ, ತುಪ್ಪ, ಸ್ವಲ್ಪ ಗೋಧಿ ಹಿಟ್ಟು, ಗೋಡಂಬಿ, ದ್ರಾಕ್ಷಿ 10 ಗ್ರಾಂ.
ತಯಾರಿಸುವ ವಿಧಾನ:
ಮೊದಲು ಮಾವಿನ ಹಣ್ಣಿನ ಸಿಪ್ಪೆ ತೆಗೆದು ತಿರುಳನ್ನು ಸಣ್ಣಗೆ ಹೆಚ್ಚಿ ಒಂದು ಸ್ಟೀಲ್ ಪಾತ್ರೆಗೆ ಹಾಕಿರಿ. ನಂತರ ಅದಕ್ಕೆ ಬೆಲ್ಲ, ತೆಂಗಿನ ತುರಿ, ಏಲಕ್ಕಿ ಪುಡಿ, ಹಾಕಿ ಒಲೆಯ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಪಾಕ ಮಾಡಿಕೊಳ್ಳಿ.
ಸ್ವಲ್ಪ ಹೊತ್ತು ಆರಿದ ಬಳಿಕ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಹಾಕಿಕೊಂಡು ಕುಡಿಯಿರಿ.