ಅನ್ನ – 4 ಕಪ್
ಈರುಳ್ಳಿ – 1
ಶುಂಠಿ – 1 ಇಂಚು
ಬೆಳ್ಳುಳ್ಳಿ – 4
ಲವಂಗ -4
ಟೋಮೋಟೋ – 3
ಮೆಂತ್ಯೆ- 2 ಕಪ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಕೊತ್ತಂಬರಿ ಪುಡಿ – 2 ಟೀ ಚಮಚ
ಗರಂ ಮಸಾಲ ಪುಡಿ – 1 ಸಣ್ಣ ಚಮಚ
ದಾಲ್ಚಿನ್ನಿ – 1
ಲವಂಗ – 2
ಏಲಕ್ಕಿ – 1
ತುಪ್ಪ – 2 ಚಮಚ
ಉಪ್ಪು-ರುಚಿಗೆ ತಕ್ಕಷ್ಟು
ಮೆಂತ್ಯ-ಟೋಮೋಟೋ ಬಾತ್ ಮಾಡುವ ವಿಧಾನ : ಒಂದು ಪಾತ್ರೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ದಾಲ್ಚಿನಿ, ಲವಂಗ, ಏಲಕ್ಕಿ ಹಾಕಿ ಮಿಕ್ಸ್ ಮಾಡಿ. ನಂತ್ರ ಕತ್ತರಿಸಿದ ಈರುಳ್ಳಿ ಹಾಕಿ. 15 ಸೆಕೆಂಡಿನ ನಂತ್ರ ಶುಂಠಿ, ಬೆಳ್ಳುಳ್ಳಿ ಸೇರಿಸಿ. ಒಂದು ನಿಮಿಷದ ನಂತ್ರ ಟೋಮೋಟೋ ಸೇರಿಸಿ. ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಇದನ್ನು ಚೆನ್ನಾಗಿ ಮಿಕ್ಸ್ ಮಾಡಿದ ಮೇಲೆ 3 ರಿಂದ 4 ನಿಮಿಷ ಬೇಯಲು ಬಿಡಿ. 4 ನಿಮಿಷಗಳ ನಂತರ ಅದಕ್ಕೆ ಮೆಂತ್ಯ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮೆಂತ್ಯ ಬೆಂದ ನಂತ್ರ ಅನ್ನವನ್ನು ಹಾಕಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ಮೆಂತ್ಯ-ಟೋಮೋಟೋ ಬಾತ್ ಸವಿಯಲು ಸಿದ್ದ.