
ಬೇಕಾಗುವ ಪದಾರ್ಥ :
ಅರ್ಧ ಕೆ.ಜಿ. ಅಕ್ಕಿ, 1 ತೆಂಗಿನ ಕಾಯಿ, ಉಪ್ಪು, ಕಡಲೆಕಾಯಿ ಎಣ್ಣೆ.
ಮಾಡುವ ವಿಧಾನ :
ಅಕ್ಕಿಯನ್ನು ತೊಳೆದು ನೆನೆಹಾಕಿ. ನೆಂದ ಬಳಿಕ ತುರಿದುಕೊಂಡಿರುವ ತೆಂಗಿನ ತುರಿಯ ಜೊತೆಗೆ ರುಬ್ಬಿಕೊಂಡು ನುಣ್ಣಗೆ ರುಬ್ಬಿದ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿರಿ.
ಅರ್ಧ ಗಂಟೆ ಬಿಟ್ಟು ಒಲೆಯ ಮೇಲೆ ಕಾವಲಿ ಇಟ್ಟು ಬಿಸಿಯಾದ ನಂತರ ದೋಸೆ ಹುಯ್ಯಿರಿ. ಬಳಿಕ ಚಟ್ನಿಯೊಂದಿಗೆ ಸವಿಯಲು ಬಿಸಿ ಬಿಸಿ ದೋಸೆ ನೀಡಿ.