ಹಲಸಿನ ಹಣ್ಣಿನ ತೊಳೆ 6
ಹಾಲು 1/2 ಲೀಟರ್
ಬೆಲ್ಲ 1 ಕಪ್
ತೆಂಗಿನ ತುರಿ 1/2 ಕಪ್
ಚಿರೋಟಿ ರವೆ 2 ಚಮಚ
ತುಪ್ಪ 5 ಚಮಚ
ದ್ರಾಕ್ಷಿ 10
ಗೋಡಂಬಿ 5
ಬಾದಾಮಿ 5
ಏಲಕ್ಕಿ ಪುಡಿ 1/4 ಚಮಚ
ನೀರು 1/2 ಕಪ್
ಮಾಡುವ ವಿಧಾನ
ಮೊದಲು ಚಿರೋಟಿ ರವೆಯನ್ನು ಹುರಿದಿಡಬೇಕು. ನಂತರ ಬಾದಾಮಿ, ಗೋಡಂಬಿಯನ್ನು ಚಿಕ್ಕದಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದುಕೊಳ್ಳಬೇಕು. ಬಳಿಕ ದ್ರಾಕ್ಷಿಯನ್ನು ಹುರಿದುಕೊಳ್ಳಬೇಕು.
ಅದೇ ತುಪ್ಪದಲ್ಲಿ ಚಿಕ್ಕದಾಗಿ ಒಂದು ಅಳತೆಯಲ್ಲಿ ಕತ್ತರಿಸಿದ ಹಲಸಿನ ಹಣ್ಣಿನ ತೊಳೆಯನ್ನು ಐದು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿದುಕೊಂಡು ಹಾಲು ಹಾಕಿ ಚೆನ್ನಾಗಿ ತಿರುವುತ್ತಿರಬೇಕು.
ಬೇಯುತ್ತಿರುವ ಮಿಶ್ರಣಕ್ಕೆ ಮಿಕ್ಸಿ ಜಾರಿನಲ್ಲಿ ರುಬ್ಬಿಕೊಂಡ ತೆಂಗಿನತುರಿ ಮತ್ತು ಸ್ವಲ್ಪ ನೀರು ಸೇರಿಸಿ ಬೇಯಿಸಬೇಕು. ನಂತರ ಹುರಿದ ಚಿರೋಟಿ ರವೆ ಮತ್ತು ಬೆಲ್ಲ ಸೇರಿಸಿ ಚೆನ್ನಾಗಿ ತಳ ಹಿಡಿಯದಂತೆ ತಿರುವುತ್ತಿರಬೇಕು. ಪಾಯಸ ಕುದಿ ಬಂದ ನಂತರ ಏಲಕ್ಕಿ ಪುಡಿ ಮತ್ತು ಗೋಡಂಬಿ, ದ್ರಾಕ್ಷಿ, ಬಾದಾಮಿ ಹಾಕಿ ಮಿಶ್ರಣ ಮಾಡಿ. ಈಗ ಹಲಸಿನ ಹಣ್ಣಿನ ಪಾಯಸ ಟೇಸ್ಟ್ ಮಾಡಲು ರೆಡಿ.