ಬೇಕಾಗುವ ಸಾಮಾಗ್ರಿಗಳು: ಕಡಲೇಹಿಟ್ಟು – 1 ಕಪ್, ಸಕ್ಕರೆ – 3/4 ಕಪ್, ಲವಂಗ – 8, ಫುಡ್ ಕಲರ್ – ಚಿಟಿಕೆ, ಏಲಕ್ಕಿ ಪುಡಿ – ಅರ್ಧ ಟೀ ಸ್ಪೂನ್, ತುಪ್ಪ – 2 ಟೀ ಸ್ಪೂನ್, ಬೇಕಿಂಗ್ ಪೌಡರ್ – ಅರ್ಧ ಟೀ ಸ್ಪೂನ್, ದ್ರಾಕ್ಷಿ, ಗೋಡಂಬಿ.
ಮಾಡುವ ವಿಧಾನ: ಒಂದು ಪಾತ್ರೆಗೆ ಜರಡಿ ಹಿಡಿದ 1 ಕಪ್ ಕಡಲೇ ಹಿಟ್ಟು ಹಾಕಿ, ಇದಕ್ಕೆ ಸ್ವಲ್ಪ ಬೇಕಿಂಗ್ ಪೌಡರ್, ಚಿಟಿಕೆ ಫುಡ್ ಕಲರ್, ಸ್ವಲ್ಪ ಉಪ್ಪು ಹಾಕಿ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ತುಂಬಾ ತೆಳ್ಳವು ಇರಬಾರದು. ಇದಕ್ಕೆ ಸ್ವಲ್ಪ ತುಪ್ಪನೂ ಹಾಕಿ ಮಿಕ್ಸ್ ಮಾಡಿ. ನಂತರ ಬಾಣಲೆಯಲ್ಲಿ ಕರಿಯಲು ಎಣ್ಣೆ ಬಿಸಿ ಮಾಡಿ. ಎಣ್ಣೆ ಕಾದ ಕೂಡಲೇ ಬಸಿಯುವ ಪಾತ್ರೆಯಲ್ಲಿ ಹಿಟ್ಟನ್ನು ಹಾಕಿ ಎಣ್ಣೆಗೆ ಬಿಡಿ. ಚೆನ್ನಾಗಿ ಕರಿದ ನಂತರ ತಟ್ಟೆಗೆ ಎತ್ತಿಡಿ. ನಂತರ ಮುಕ್ಕಾಲು ಕಪ್ ಸಕ್ಕರೆಗೆ ಸ್ವಲ್ಪ ನೀರು ಹಾಕಿ ಪಾಕ ಮಾಡಿ. ಅಂಟು ಅಂಟಾಗಿ ಬಂದರೆ ಸಾಕು.
ನಂತರ ಇದಕ್ಕೆ ಏಲಕ್ಕಿ ಪುಡಿ ಹಾಕಿ. ಕೂಡಲೇ ಈ ಪಾಕಕ್ಕೆ ಬೂಂದಿ ಹಾಕಿ ಮಿಕ್ಸ್ ಮಾಡಿ. ಪಾಕ ಎಲ್ಲಾ ಚೆನ್ನಾಗಿ ಹೀರಿದ ಕೂಡಲೇ ಸ್ಟೌ ಆಫ್ ಮಾಡಿ. ನಂತರ ಇದಕ್ಕೆ ಡ್ರೈ ಫ್ರೂಟ್ಸ್ ಮಿಕ್ಸ್ ಮಾಡಿ 2 ಗಂಟೆ ಹಾಗೆಯೇ ಬಿಡಿ. ನಂತರ ಸರ್ವಿಂಗ್ ಪ್ಲೇಟ್ ಗೆ ಹಾಕಿದರೆ ಸವಿಯಲು ರುಚಿಯಾದ ಬೂಂದಿ ರೆಡಿ.