ಮೊದಲು ಕ್ಯಾರೆಟನ್ನು ತುರಿದು ಹಾಲಿನ ಜೊತೆ ಸೇರಿಸಿ ತಿರುವಿಟ್ಟು ಕೊಳ್ಳಬೇಕು.
ದಪ್ಪ ತಳದ ಪಾತ್ರೆಗೆ ಸಕ್ಕರೆ ಹಾಗೂ ಅರ್ಧ ಕಪ್ ನೀರು ಹಾಕಿ ಕಾಯಲು ಬಿಡಬೇಕು. ನಂತರ ಸಕ್ಕರೆ ಕರಗಿ ಪಾಕಕ್ಕೆ ತಿರುಗಿದಾಗ ಹಾಲಿನಲ್ಲಿ ತಿರುವಿಟ್ಟುಕೊಂಡ ಕ್ಯಾರೆಟ್ ಮತ್ತು ಅರ್ಧ ಕಪ್ ತುಪ್ಪ ಹಾಕಬೇಕು.
ಬಳಿಕ ಕಡಲೆ ಹಿಟ್ಟು ಹಾಕುತ್ತಾ ತಿರುವುತ್ತಿರಬೇಕು. ಹಾಗೇ ಮಧ್ಯೆ ಮಧ್ಯೆ ತುಪ್ಪ ಹಾಕುತ್ತಾ ಮಿಶ್ರಣವನ್ನು ಕೂಡಿಸುತ್ತಿರಬೇಕು. ನಂತರ ಮಿಶ್ರಣ ಪಾತ್ರೆ ತಳ ಬಿಡುತ್ತಾ ಬಂದಾಗ ಉರಿ ಆರಿಸಿ ತುಪ್ಪ ಸವರಿದ ತಟ್ಟೆಗೆ ಹಾಕಬೇಕು. ಮಿಶ್ರಣ ತಣ್ಣಗಾದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿದರೆ ಕ್ಯಾರೆಟ್ ಮೈಸೂರು ಪಾಕ್ ಸವಿಯಲು ಸಿದ್ಧ.