ಎಳೆ ಬದನೆಕಾಯಿ 1/4 ಕೆಜಿ
ಹಸಿಮೆಣಸಿನಕಾಯಿ 5-6
ಈರುಳ್ಳಿ-2
ಬೆಣ್ಣೆ 1/2 ಕಪ್
ಕರಿಬೇವು – 1 ಕಡ್ಡಿ
ಇಂಗು – 2 ಚಮಚ
ಜೀರಿಗೆ – 2 ಚಮಚ
ಸಾಸಿವೆ – 1 ಚಮಚ
ಕಡಲೇಬೇಳೆ – 1 ಚಮಚ
ಉದ್ದಿನ ಬೇಳೆ – 1 ಚಮಚ
ಸಕ್ಕರೆ – 1 ಚಮಚ
ಹುಣಸೆಹಣ್ಣು ಸ್ವಲ್ಪ
ಅರಿಶಿಣ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಬೆಲ್ಲ ಸ್ವಲ್ಪ
ಗರಂಮಸಾಲೆ ಸ್ವಲ್ಪ
ಕೊತ್ತಂಬರಿ ಸೊಪ್ಪು ತಕ್ಕಷ್ಟು
ಹುರಿದ ಶೇಂಗಾ ಪುಡಿ – 1 ಕಪ್
ತುರಿದ ಕೊಬ್ಬರಿ – 1 ಕಪ್
ಮಾಡುವ ವಿಧಾನ
ಬದನೆಕಾಯಿಗಳನ್ನು ಚೆನ್ನಾಗಿ ತೊಳೆದು ಮಧ್ಯದಲ್ಲಿ ಸೀಳಬೇಕು. ಬಳಿಕ ಹೋಳುಗಳನ್ನು ಐದು ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಇಟ್ಟು ಬೇಯಿಸಬೇಕು. ಈರುಳ್ಳಿ, ಹಸಿ ಮೆಣಸಿನಕಾಯಿ, ಹುಣಸೆಹಣ್ಣು, ಜೀರಿಗೆ, ಉಪ್ಪು, ಬೆಲ್ಲ, ಅರಿಶಿಣ, ಗರಂ ಮಸಾಲೆ ಪುಡಿ, ಹುರಿದ ಶೇಂಗಾ ಪುಡಿ ಮತ್ತು ತುರಿದ ಕೊಬ್ಬರಿ ಹಾಕಿ ಚೆನ್ನಾಗಿ ಪೇಸ್ಟ್ ನಂತೆ ತಯಾರಿಸಬೇಕು.
ಈ ಪೇಸ್ಟ್ ಅನ್ನು ಬದನೆಕಾಯಿ ಮಧ್ಯೆ ಇಡಬೇಕು. ಒಲೆ ಮೇಲೆ ಬಾಣಲೆ ಇಟ್ಟು ಅದರಲ್ಲಿ ಎಣ್ಣೆ ಹಾಕಬೇಕು. ಬೆಣ್ಣೆ ಕರಗಿದ ನಂತರ ಉದ್ದಿನಬೇಳೆ, ಕಡಲೆಬೇಳೆ, ಸಾಸಿವೆ, ಜೀರಿಗೆ, ಕರಿಬೇವು, ಇಂಗು ಹಾಕಿ ಬಿಸಿಯಾದ ನಂತರ ಅದರಲ್ಲಿ ಹಾಕಬೇಕು. ತಳ ಹಿಡಿಯದಂತೆ ಕೈಯಾಡಿಸುತ್ತಿರಬೇಕು. ಒಲೆಯ ಉರಿ ಚಿಕ್ಕದಾಗಿರಲಿ. ಬದನೆಕಾಯಿಗಳು ಬೆಂದು ಮೆತ್ತಗಾದ ನಂತರ ಕೊತ್ತಂಬರಿ ಸೊಪ್ಪು ಹಾಕಿ ಕೆಳಗಿಳಿಸಿ. ಈಗ ಬೆಣ್ಣೆ ಬದನೆಕಾಯಿ ಸವಿಯಲು ಸಿದ್ಧ.