ಟೊಮೆಟೋ 6
ಉದ್ದಿನ ಬೇಳೆ 1 ಗ್ಲಾಸ್
ಇಡ್ಲಿ ರವೆ 2 ಗ್ಲಾಸ್
ಉಪ್ಪುರುಚಿಗೆ ತಕ್ಕಷ್ಟು
ಎಣ್ಣೆ 2 ಚಮಚ
ಮಾಡುವ ವಿಧಾನ
ಉದ್ದಿನ ಬೇಳೆ ಮತ್ತು ಇಡ್ಲಿ ರವೆಯನ್ನು ಪ್ರತ್ಯೇಕವಾಗಿ ನೀರು ಹಾಕಿ ಮೂರು ಗಂಟೆಗಳ ಕಾಲ ನೆನೆ ಹಾಕಬೇಕು. ಬಳಿಕ ಉದ್ದಿನ ಬೇಳೆಯನ್ನು ನಯವಾಗಿ ಹಿಟ್ಟು ಮಾಡಿಕೊಳ್ಳಬೇಕು. ಇದಕ್ಕೆ ಇಡ್ಲಿ ರವೆ ಮತ್ತು ಉಪ್ಪನ್ನು ಸೇರಿಸಿ ಪಾತ್ರೆಯಲ್ಲಿ ಮುಚ್ಚಿಡಿ.
ರಾತ್ರಿ ವೇಳೆ ಹೀಗೆ ತಯಾರಿಸಿದ ಹಿಟ್ಟಿಗೆ ಬೆಳಗ್ಗೆ ಟೊಮೆಟೋವನ್ನು ರುಬ್ಬಿ ರಸ ತೆಗೆದುಕೊಂಡು ಹಿಟ್ಟಿನ ಜೊತೆ ಸೇರಿಸಬೇಕು. ಹಿಟ್ಟು ತೀರಾ ತೆಳ್ಳಗಾಗದಂತೆ ಎಚ್ಚರವಿರಲಿ. ಈಗ ಇಡ್ಲಿ ಪ್ಲೇಟ್‌ಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಅದರ ಮೇಲೆ ಹಿಟ್ಟನ್ನು ಹಾಕಿ ಆವಿಯಲ್ಲಿ ಬೇಯಿಸಿ.
ತಯಾರಾದ ಇಡ್ಲಿಯನ್ನು ಕೊಬ್ಬರಿ ಚಟ್ನಿಯೊಂದಿಗೆ ಸವಿದರೆ ರುಚಿ ರುಚಿಯಾಗಿರುತ್ತದೆ.