ಮಧ್ಯಮ ಗಾತ್ರದ ಮೂಲಂಗಿ – 3
ಈರುಳ್ಳಿ – 1
ಟೊಮೆಟೊ – 2
ಹಸಿಮೆಣಸಿನಕಾಯಿ – 1
ಕಡಲೆಬೇಳೆ – 1/2 ಟೀ ಚಮಚ
ಉದ್ದಿನಬೇಳೆ – 1 ಟೀ ಚಮಚ
ಜೀರಿಗೆ – 1/2 ಟೀ ಚಮಚ
ಸಾಸಿವೆ – 1/2 ಟೀ ಚಮಚ
ಕರಿ ಬೇವು ಸ್ವಲ್ಪ
ಅರಿಶಿಣ – 1/4 ಟೀ ಚಮಚ
ಖಾರಪುಡಿ – 1/2 ಟೀ ಚಮಚ
ಧನಿಯಾ ಪುಡಿ – 1/2 ಟೀ ಚಮಚ
ಜೀರಿಗೆ ಪುಡಿ – 1/2 ಟೀ ಚಮಚ
ಗರಂ ಮಸಾಲ – 1/4 ಟೀ ಚಮಚ
ಎಣ್ಣೆ – 2 ಟೇಬಲ್ ಚಮಚ
ತುಪ್ಪ – 1/2 ಟೀ ಚಮಚ
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲು ಮೂಲಂಗಿ, ಈರುಳ್ಳಿ ಮತ್ತು ಟೊಮೆಟೊ ಇವುಗಳನ್ನು ಚಿಕ್ಕದಾಗಿ ಕತ್ತರಿಸಿ ಕೊಳ್ಳಬೇಕು. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಹುರಿಯಿರಿ. ಸಾಸಿವೆ ಸಿಡಿದು ಬೇಳೆಗಳು ಕೆಂಬಣ್ಣ ಬಂದಾಗ ಈರುಳ್ಳಿಯನ್ನು ಹಾಕಿ ಬಾಡಿಸಿ. ನಂತರ ಟೊಮೆಟೊ ಹಾಕಿ ಮೆತ್ತಗೆ ಬೇಯಿಸಿ. ಬಳಿಕ ಸಣ್ಣಗೆ ಹೆಚ್ಚಿದ ಮೂಲಂಗಿಯನ್ನು ಹಾಕಿ ಅರ್ಧ ಕಪ್ ನೀರು ಹಾಕಿ 10 ನಿಮಿಷ ಬೇಯಲು ಬಿಡಬೇಕು.
ಬೆಂದ ಪದಾರ್ಥಗಳಿಗೆ ಅರಿಶಿಣ, ಜೀರಿಗೆ, ಧನಿಯಾ ಮತ್ತು ಗರಂ ಮಸಾಲೆಯನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ತುಪ್ಪವನ್ನು ಹಾಕಿ ಮಿಶ್ರಣ ಮಾಡಿ. 2 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ ಒಲೆಯಿಂದ ಇಳಿಸುವಾಗ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿ. ಈಗ ರುಚಿಯಾದ ಮೂಲಂಗಿ ಕರಿಯನ್ನು ಅನ್ನ, ರೊಟ್ಟಿ ಮತ್ತು ಚಪಾತಿಯೊಂದಿಗೆ ಸವಿಯಿರಿ.