ಕಡಾ ಪ್ರಸಾದ ಇದು ಗುರುದ್ವಾರದಲ್ಲಿ ಭಕ್ತರಿಗೆ ನೀಡುವ ಪ್ರಸಾದವಾಗಿದೆ. ಗೋಧಿಹಿಟ್ಟಿನಿಂದ ಮಾಡುವ ಇದರ ಸ್ವಾದ ಕೂಡ ತುಂಬಾ ಚೆನ್ನಾಗಿರುತ್ತದೆ. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
1 ಕಪ್ – ಗೋಧಿ ಹಿಟ್ಟು, 1 ಕಪ್ – ಸಕ್ಕರೆ, 1 ಕಪ್ – ತುಪ್ಪ, 3 ಕಪ್ – ನೀರು.
ಮಾಡುವ ವಿಧಾನ:
ಪ್ಯಾನ್ ಗೆ ಒಂದು ಕಪ್ ಸಕ್ಕರೆ ಹಾಕಿ 3 ಕಪ್ ನೀರು ಸೇರಿಸಿ ಗ್ಯಾಸ್ ಮೇಲೆ ಇಟ್ಟು ಹದ ಉರಿಯಲ್ಲಿ ಇದನ್ನು ಕುದಿಸಿಕೊಳ್ಳಿ. ಸಕ್ಕರೆ ಕರಗಿದ ಮೇಲೆ ಗ್ಯಾಸ್ ಆಫ್ ಮಾಡಿ. ನಂತರ ಒಂದು ದಪ್ಪ ತಳದ ಪಾತ್ರೆಗೆ ಗೋಧಿಹಿಟ್ಟು ಹಾಕಿ ಇದನ್ನು ಪರಿಮಳ ಬರುವವರೆಗೆ ಹುರಿದುಕೊಂಡು ಒಂದು ತಟ್ಟೆಗೆ ತೆಗೆದುಕೊಳ್ಳಿ.
ನಂತರ ಅದೇ ಬಾಣಲೆಗೆ ಒಂದು ಕಪ್ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ. ಇದು ಬಿಸಿಯಾಗುತ್ತಿದ್ದಂತೆ ಅದಕ್ಕೆ ಹುರಿದಿಟ್ಟುಕೊಂಡ ಗೋಧಿಹಿಟ್ಟು ಸೇರಿಸಿ ಗಂಟಾಗದಂತೆ ಚೆನ್ನಾಗಿ ತಿರುವಿ. ಗೋಧಿ ಹಿಟ್ಟಿನ ಬಣ್ಣ ಬದಲಾಗುತ್ತಿದ್ದಂತೆ ಇದಕ್ಕೆ ಸಕ್ಕರೆ ಪಾಕ ಹಾಕಿ ಮಿಕ್ಸ್ ಮಾಡಿ. ಇದು ದಪ್ಪಗಾಗುತ್ತಿದ್ದಂತೆ ತುಪ್ಪ ಬಿಡುವುದಕ್ಕೆ ಶುರುವಾಗುತ್ತದೆ. ಈ ಮಿಶ್ರಣ ತಳ ಬಿಡುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ.