ಸಲಾಡ್ ಅಂದ್ರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಆರೋಗ್ಯಕ್ಕೂ ಒಳ್ಳೆಯದಾದ ಎಲೆಕೋಸು ಸಲಾಡ್ ತಯಾರಿಸುವುದು ಬಹಳ ಸುಲಭ. ಫಟಾಫಟ್ ಸಲಾಡ್ ತಯಾರಿಸಿ, ಎಂಜಾಯ್ ಮಾಡಿ.
ಎಲೆಕೋಸು ಸಲಾಡ್ ಮಾಡಲು ಬೇಕಾಗುವ ಸಾಮಗ್ರಿಗಳು :
ಸಣ್ಣದಾಗಿ ಹೆಚ್ಚಿದ ಎಲೆಕೋಸಿನ 200 ಎಲೆಗಳು, ಕತ್ತರಿಸಿದ 2 ಹಸಿಮೆಣಸು, ಒಂದು ಚಮಚ ಜೀರಿಗೆ ಹಾಗೂ ಕೊತ್ತಂಬರಿ ಪುಡಿ, 3 ಚಮಚ ಎಣ್ಣೆ, ಸಣ್ಣ ಚಮಚ ಅರಿಶಿನ ಪುಡಿ, ಸ್ವಲ್ಪ ಸಾಸಿವೆ. ರುಚಿಗೆ ತಕ್ಕಷ್ಟು ಉಪ್ಪು.
ಎಲೆಕೋಸು ಸಲಾಡ್ ಮಾಡುವ ವಿಧಾನ :
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಸಾಸಿವೆ ಕಾಳುಗಳನ್ನು ಹಾಕಿ. ಅದು ಚಟ ಚಟಾ ಅಂದಾಗ ಅರಿಶಿನ ಹಾಗೂ ಹಸಿಮೆಣಸಿನ್ನು ಹಾಕಿ 20 ಸೆಕೆಂಡ್ ಬಿಡಿ. ನಂತ್ರ ಎಲೆಕೋಸನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ ಜೀರಿಗೆ ಕೊತ್ತಂಬರಿ ಪುಡಿ, ಉಪ್ಪನ್ನು ಹಾಕಿ. ನಂತ್ರ ಸರಿಯಾಗಿ ಎರಡು ನಿಮಿಷ ಬಿಟ್ಟು ಗ್ಯಾಸ್ ಬಂದ್ ಮಾಡಿ, ಸರ್ವ್ ಮಾಡಿ.