ನಿಮ್ಮ ಪ್ರೀತಿಪಾತ್ರರನ್ನು ಮೆಚ್ಚಿಸಬೇಕೇ ಹಾಗಿದ್ದಲ್ಲಿ ಈ ಶ್ರೇಷ್ಟ ಹೈದರಾಬಾದಿ ಫ್ಲೇವರ್ ಹೊಂದಿರುವ ಕೆನೆಭರಿತ ರುಚಿಕರ ಬಾದಾಮ್ ಕಾ ಹರಿರಾ ಮಾಡಿಕೊಡಿ. ಈ ಸ್ವಾದಿಷ್ಟ ಸ್ಮೂಥಿ ಬಾಯಲ್ಲಿರುವ ಟೇಸ್ಟೀ ಬಡ್ ಗಳನ್ನು ಪ್ರೇರೇಪಿಸಿ ನಿಮ್ಮ ಕೈರುಚಿಯನ್ನು ಕೊಂಡಾಡುವಂತೆ ಮಾಡುತ್ತದೆ.
ಬೇಕಾಗಿರುವ ಪದಾರ್ಥಗಳು : 200 ಮಿ.ಲೀ. ಹಾಲು, 15 ನೆನೆಸಿದ ಬಾದಾಮಿಗಳು, 2 ಲವಂಗ, 1 ಏಲಕ್ಕಿ, 1 ಕಪ್ ನೀರು, 3 ಚಮಚ ಅಕ್ಕಿ, 1 ಚಮಚ ತುಪ್ಪ, 1 ಇಂಚು ದಾಲ್ಚಿನ್ನಿ , 3 ಚಮಚ ಸಕ್ಕರೆ, 1 ಚಮಚ ತೆಂಗಿನಹಾಲಿನ ಪುಡಿ.
ಮಾಡುವ ವಿಧಾನ : ಮೊದಲಿಗೆ ಒಂದು ಪ್ಯಾನ್ ನಲ್ಲಿ ಹಾಲನ್ನು ಹಾಕಿ, ಮೀಡಿಯಂ ಫ್ಲೇಮ್ ನಲ್ಲಿ ಕುದಿಸಿಕೊಳ್ಳಿ. ನಂತರ ಅದನ್ನು ತಣ್ಣಗಾಗಲು ಬಿಡಿ. ಅಷ್ಟರಲ್ಲಿ, ಅಕ್ಕಿಯನ್ನು 30 ನಿಮಿಷ ನೀರಿನಲ್ಲಿ ನೆನೆಸಿ. 2-3 ಗಂಟೆಗಳ ಕಾಲ ನೆನೆಸಿದ ಬಾದಾಮಿಯ ಸಿಪ್ಪೆಯನ್ನು ಬಿಡಿಸಿಕೊಳ್ಳಿ. ನಂತರ ಗ್ರೈಂಡರ್ ನಲ್ಲಿ ನೆನೆಸಿದ ಬಾದಾಮಿ, ನೆನೆಸಿದ ಅಕ್ಕಿ ಜೊತೆಗೆ ತೆಂಗಿನಕಾಯಿ ಹಾಲಿನ ಪುಡಿಯನ್ನು ಸೇರಿಸಿ ಮೃದುವಾಗಿ ಪೇಸ್ಟ್ ತಯಾರಿಸಿಕೊಳ್ಳಿ.
ಈಗ ಒಂದು ಮಸ್ಲಿನ್ ಬಟ್ಟೆ ತೆಗೆದುಕೊಂಡು ದೊಡ್ಡ ಬೌಲ್ ಮೇಲೆ ಹರಡಿ, ಗ್ರೈಂಡ್ ಮಾಡಿದ ಪೇಸ್ಟ್ ಅನ್ನು ಹಾಕಿಕೊಂಡು, ಅದರಲ್ಲಿರುವ ದ್ರವವನ್ನು ಸ್ಕ್ವೀಜ್ ಮಾಡಿ. ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸಿಕೋಳ್ಳುತ್ತಾ ಈ ರೀತಿ 2-3 ಬಾರಿ ಹಿಂಡಿಕೊಳ್ಳಿ. ನಂತರ ಮೀಡಿಯಂ ಫ್ಲೇಮ್ ನಲ್ಲಿ ಒಂದು ಬಾಣಲೆಯನ್ನು ಇಟ್ಟು, ಇದಕ್ಕೆ ತುಪ್ಪವನ್ನು ಹಾಕಿ, ತುಪ್ಪ ಕರಗಿದ ಮೇಲೆ, ಇದಕ್ಕೆ ಲವಂಗ, ಏಲಕ್ಕಿ ಮತ್ತು ದಾಲ್ಚಿನ್ನಿಯನ್ನು ಸೇರಿಸಿ ಕೆಲವು ಸೆಕೆಂಡ್ ವರೆಗೆ ಫ್ರೈ ಮಾಡಿಕೊಳ್ಳಿ. ಈಗ ಸ್ಕ್ವೀಜ್ ಮಾಡಿಕೊಂಡ ದ್ರವವನ್ನು ಇದಕ್ಕೆ ಸೇರಿಸಿ, ಗಂಟುಗಳಾಗದಂತೆ ನಿಧಾನವಾಗಿ ಮಿಕ್ಸ್ ಮಾಡಿ.
ಕುದಿಯುತ್ತಿರುವ ಮಿಶ್ರಣ ದಪ್ಪವಾಗಿ ಹಾಗೆ ಮೃದುವಾದ ಪೇಸ್ಟ್ ಆಗಿ ಪರಿವರ್ತನೆಯಾಗುವವರೆಗೂ ಕಲೆಸುತ್ತಾ ಇರಿ, ಇದಕ್ಕೆ ಈಗ ಸಕ್ಕರೆ ಮತ್ತು ಹಾಲನ್ನು ಸೇರಿಸಿ ಚೆನ್ನಾಗಿ ಕುದಿಸಿದ ನಂತರ ಸ್ಟೌವ್ ಆಫ್ ಮಾಡಿ. ಬೇಕಿದ್ದಲ್ಲಿ ಫ್ರಿಡ್ಜ್ ನಲ್ಲಿಟ್ಟು ಸಹ ಕುಡಿಯಬಹುದು, ಹೈದರಾಬಾದಿ ಬಾದಾಮ್ ಕಾ ಹರಿರಾ ಈಸ್ ರೆಡಿ ಟು ಸರ್ವ್.