ಸಿಹಿ-ಹುಳಿ ರುಚಿಯ ಕಿತ್ತಳೆ ಹಣ್ಣಿನ ಜ್ಯೂಸ್ ಅಥವಾ ಸಲಾಡ್ ಬಗ್ಗೆ ಮಾತ್ರ ನೀವು ಕೇಳಿರುತ್ತೀರಿ. ಆದರೆ ಆ ಹಣ್ಣನಿಂದ ಇನ್ನಿತರ ಸ್ವಾದಿಷ್ಟಕರವಾದ ತಿನಿಸುಗಳನ್ನು ಮಾಡಬಹುದು. ಇಲ್ಲಿದೆ ಕಿತ್ತಳೆ ಹಣ್ಣಿನ ಕೇಸರಿಭಾತ್ ಮಾಡುವ ವಿಧಾನ.
ಬೇಕಾಗುವ ಸಾಮಾಗ್ರಿಗಳು
ಮೃದುವಾದ ಅನ್ನ-1 ಕಪ್
ಕಿತ್ತಳೆ ರಸ-1 ಕಪ್
ಬೆಲ್ಲ ಅಥವಾ ಸಕ್ಕರೆ-ರುಚಿಗೆ ತಕ್ಕಷ್ಟು
ತುಪ್ಪ-ಅರ್ಧ ಕಪ್
ಕರಿದ ದ್ರಾಕ್ಷಿ ಗೋಡಂಬಿ-ಅರ್ಧ ಕಪ್
ಏಲಕ್ಕಿ ಪುಡಿ-ಕಾಲು ಚಮಚ
ಕೇಸರಿಯುಕ್ತ ಬಾದಾಮಿ ಪುಡಿ-1 ಟೇಬಲ್ ಸ್ಪೂನ್
ಮಾಡುವ ವಿಧಾನ
ಕಿತ್ತಳೆ ರಸಕ್ಕೆ ಬೆಲ್ಲ ಅಥವಾ ಸಕ್ಕರೆ ಹಾಕಿ ಬಿಸಿ ಮಾಡಿ. ನಂತರ ತುಪ್ಪ ಹಾಕಿ ಕರಗಲು ಬಿಡಿ.
ನಂತರ ಅದಕ್ಕೆ ಅನ್ನ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ, ಬಾದಾಮಿ ಪುಡಿ ಸೇರಿಸಿ ಮೇಲಿನಿಂದ ಒಂದು ಸ್ಪೂನ್ ತುಪ್ಪ ಹಾಕಿ ಕಲಸಿದರೆ ಕಿತ್ತಳೆ ಹಣ್ಣಿನ ಕೇಸರಿಭಾತ್ ರೆಡಿ ಟು ಈಟ್.