ಸಾಸ್ ಎಂದರೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಅದರಲ್ಲೂ ಸ್ಟ್ರಾಬೆರಿ ಸಾಸ್ ಎಂದರೆ ಕೇಳಬೇಕೆ…? ಯಾವುದೇ ರಾಸಾಯನಿಕಗಳನ್ನು ಬಳಸದೇ ಮನೆಯಲ್ಲಿಯೇ ಸುಲಭವಾಗಿ ಸ್ಟ್ರಾಬೆರಿ ಸಾಸ್ ತಯಾರಿಸಬಹುದು. ಐಸ್ ಕ್ರೀಂ, ಪ್ಯಾನ್ ಕೇಕ್, ಬ್ರೌನಿ ಮಾಡಿದಾಗ ಇದನ್ನು ಉಪಯೋಗಿಸಬಹುದು.
ಬೇಕಾಗುವ ಸಾಮಗ್ರಿಗಳು:
ಸಣ್ಣಗೆ ಹೆಚ್ಚಿದ ಸ್ಟ್ರಾಬೆರಿ – 500 ಗ್ರಾಂ, ¼ ಕಪ್ – ಸಕ್ಕರೆ, 1 ಟೇಬಲ್ ಸ್ಪೂನ್ – ಲಿಂಬೆಹಣ್ಣಿನ ರಸ, 1 ಟೇಬಲ್ ಸ್ಪೂನ್ – ಕಾರ್ನ್ ಸ್ಟಾರ್ಚ್, 2 – ಟೇಬಲ್ ಸ್ಪೂನ್ – ನೀರು, 1 ಟೀ ಸ್ಪೂನ್ – ವೆನಿಲ್ಲಾ ಎಸೆನ್ಸ್.
ಮಾಡುವ ವಿಧಾನ:
ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಸ್ಟ್ರಾಬೆರಿ, ಸಕ್ಕರೆ, ಲಿಂಬೆಹಣ್ಣಿನ ರಸ ಹಾಕಿ ಮಧ್ಯಮ ಉರಿಯಲ್ಲಿ 20 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಸೌಟಿನ ಹಿಂಬದಿಯ ಸಹಾಯದಿಂದ ಸ್ಟ್ರಾಬೆರಿಯನ್ನು ನಿಧಾನಕ್ಕೆ ಒತ್ತಿ ತಿರುವುತ್ತಲೇ ಇರಿ. ನಂತರ ಕಾರ್ನ್ ಸ್ಟಾರ್ಚ್ ಗೆ ನೀರು ಹಾಕಿ ಮಿಕ್ಸ್ ಮಾಡಿ ಅದನ್ನುಸ್ಟ್ರಾಬೆರಿ ಮಿಶ್ರಣಕ್ಕೆ ಹಾಕಿ ಹಾಗೇ ವೆನಿಲ್ಲಾ ಎಸೆನ್ಸ್ ಕೂಡ ಹಾಕಿ ಮಿಕ್ಸ್ ಮಾಡಿ.
ಸಾಸ್ ನ ಹದಕ್ಕೆ ಬರುವವರಗೆ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಟ್ಟು ಗಾಳಿಯಾಡದ ಡಬ್ಬದಲ್ಲಿ ಸ್ಟೋರ್ ಮಾಡಿಕೊಳ್ಳಿ.