ಸಿರಿಧಾನ್ಯಗಳು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಬಳಸಿ ರುಚಿಕರವಾದ ಲಡ್ಡು ಮಾಡುವ ವಿಧಾನ ಇಲ್ಲಿದೆ ಒಮ್ಮೆ ಟ್ರೈ ಮಾಡಿ ನೋಡಿ.
1 ಕಪ್ ಸಜ್ಜೆಯನ್ನು ತೆಗೆದುಕೊಂಡು ಅದನ್ನು ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಹುರಿದುಕೊಳ್ಳಿ. ಇದು ಪರಿಮಳ ಬಂದಾಗ ಗ್ಯಾಸ್ ಆಪ್ ಮಾಡಿ. ನಂತರ ¼ ಕಪ್ ಬಾದಾಮಿಯನ್ನು ಕೂಡ ಫ್ರೈ ಮಾಡಿಕೊಳ್ಳಿ. ಎಣ್ಣೆ/ತುಪ್ಪ ಹಾಕುವುದು ಬೇಡ. ನಂತರ ಹುರಿಸ ಸಜ್ಜೆ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಇದಕ್ಕೆ ಬಾದಾಮಿ ಹಾಕಿ ಪುಡಿ ಮಾಡಿ.
ತದನಂತರ 1/3ಕಪ್ ಬೆಲ್ಲ ಹಾಕಿ ಪುಡಿ ಮಾಡಿ. ಇವಿಷ್ಟನ್ನೂ ಒಂದು ಬೌಲ್ ಗೆ ಹಾಕಿ ಅದಕ್ಕೆ ಸ್ವಲ್ಪ ಬಿಸಿ ನೀರು ಸೇರಿಸಿ ಉಂಡೆಕಟ್ಟಿದರೆ ರುಚಿಕರವಾದ ಸಜ್ಜೆ ಲಡ್ಡು ಸವಿಯಲು ಸಿದ್ಧ. ಇದನ್ನು 2 ದಿನಗಳವರೆಗೆ ಹೊರಗಡೆ ಇಟ್ಟು ತಿನ್ನಬಹುದು. ಫ್ರಿಡ್ಜ್ ನಲ್ಲಿಯೂ ಕೂಡ ಇಡಬಹುದು.