ಬೇಕಾಗುವ ಸಾಮಾಗ್ರಿಗಳು:
ಅಕ್ಕಿ ಹಿಟ್ಟು – 1 ಕಪ್, ಮೊಸರು -1 ಕಪ್, ಶುಂಠಿ -1 ಟೀ ಸ್ಪೂನ್ ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು, ಹಸಿಮೆಣಸು -1, ಈರುಳ್ಳಿ -1, ಕೊತ್ತಂಬರಿ ಸೊಪ್ಪು -ಸ್ವಲ್ಪ, ಇಂಗು -ಚಿಟಿಕೆ, ಕಾಳುಮೆಣಸು -4. ¼ ಟೀ ಸ್ಪೂನ್ – ಜೀರಿಗೆ.
ಮಾಡುವ ವಿಧಾನ:
ಮೊದಲಿಗೆ ಒಂದು ದೊಡ್ಡ ಬೌಲ್ ಗೆ ಅಕ್ಕಿ ಹಿಟ್ಟು ಹಾಕಿ ಅದಕ್ಕೆ ಮೊಸರು ಹಾಗೇ 1 ಕಪ್ ನೀರು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಉಪ್ಪು, ಇಂಗು, ಜೀರಿಗೆ, ಜಜ್ಜಿಕೊಂಡ ಕಾಳುಮೆಣಸು, ಶುಂಠಿ, ಹಸಿಮೆಣಸು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಒಂದು ಪ್ಯಾನ್ ಗೆ ಈ ಹಿಟ್ಟನ್ನು ಹಾಕಿ ಸಣ್ಣ ಉರಿಯಲ್ಲಿ ಇಟ್ಟುಕೊಂಡು ಚೆನ್ನಾಗಿ ಕೈಯಾಡಿಸಿ. ಒಂದು ಮುದ್ದೆ ಆಗುವ ರೀತಿ ಮಾಡಿ. ನಂತರ ಕೊತ್ತಂಬರಿ ಸೊಪ್ಪು, ಈರುಳ್ಳಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದು ತಣ್ಣಗಾದ ನಂತರ ವಡೆ ಆಕಾರದಲ್ಲಿ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ.