ಬೆಳಗಿನ ತಿಂಡಿಗೆ ಕೆಲವರಿಗೆ ರೈಸ್ ಬಾತ್ ಬೇಕೆ ಬೇಕು. ಅದರಲ್ಲೂ ಲೆಮನ್ ರೈಸ್ ಇದ್ದರೆ ಕೇಳಬೇಕೆ….? ಇಲ್ಲಿ ರುಚಿಕರವಾಗಿ ಲೆಮನ್ ರೈಸ್ ಮಾಡುವ ವಿಧಾನ ಇದೆ ಟ್ರೈ ಮಾಡಿ.
ಬೇಕಾಗುವ ಸಾಮಾಗ್ರಿಗಳು:
1 ½ ಕಪ್- ಅನ್ನ, 3 ಟೇಬಲ್ ಸ್ಪೂನ್-ಲಿಂಬೆಹಣ್ಣಿನ ರಸ, ½ ಟೀ ಸ್ಪೂನ್-ಉಪ್ಪು, 2 ಟೇಬಲ್ ಸ್ಪೂನ್-ಎಣ್ಣೆ, ¼ ಟೀ ಸ್ಪೂನ್-ಸಾಸಿವೆ, 5 ಟೇಬಲ್ ಸ್ಪೂನ್-ಕಡಲೆಬೀಜ, ½ ಟೀ ಸ್ಪೂನ್–ಅರಿಶಿನ, 2-ಹಸಿಮೆಣಸು, ಕರಿಬೇವು-10 ಎಸಳು, 1 ಟೀ ಸ್ಪೂನ್- ಕಡಲೆಬೇಳೆ, 1 ಟೀ ಸ್ಪೂನ್-ಉದ್ದಿನಬೇಳೆ, ಚಿಟಿಕೆ-ಇಂಗು, 1-ಒಣಮೆಣಸು.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದಕ್ಕೆ ಕಡಲೆಬೀಜ ಹಾಕಿ ಹುರಿದುಕೊಂಡು ಒಂದು ಪ್ಲೇಟ್ ಗೆ ತೆಗೆದುಕೊಳ್ಳಿ. ನಂತರ ಇದಕ್ಕೆ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ ಹಾಕಿ ಪರಿಮಳ ಬರುವವರೆಗೆ ಹುರಿದುಕೊಂಡು ಹಸಿಮೆಣಸು, ಒಣಮೆಣಸು ಕರಿಬೇವು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿ.
ಚಿಟಿಕೆ ಇಂಗು, ಅರಿಶಿನ, ಉಪ್ಪು ಸೇರಿಸಿ 3 ಟೇಬಲ್ ಸ್ಪೂನ್ ನೀರು ಹಾಕಿ. ನೀರು ಇಂಗಿದ ಬಳಿಕ ಗ್ಯಾಸ್ ಅಫ್ ಮಾಡಿ ಅನ್ನ ಹಾಕಿ ನಂತರ ಲಿಂಬೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಉಪ್ಪು ಬೇಕಿದ್ದರೆ ಸೇರಿಸಿಕೊಳ್ಳಿ, ನಂತರ ಹುರಿದುಕೊಂಡ ಕಡಲೆಬೀಜ ಹಾಕಿ ಮಿಕ್ಸ್ ಮಾಡಿ ಸರ್ವ್ ಮಾಡಿ.