ಮಳೆ ಬರುವ ಸಮಯದಲ್ಲಿ ರುಚಿಕರವಾದ ಗೋಡಂಬಿ ಮಸಾಲ ಫ್ರೈ ಮಾಡಿಕೊಂಡು ಸಂಜೆ ಹೊತ್ತು ಸವಿಯುತ್ತಿದ್ದರೆ ಅದರ ಖುಷಿನೇ ಬೇರೆ. ಮನೆಯಲ್ಲಿ ಗೋಡಂಬಿ ಇದ್ದರೆ ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
1 ಕಪ್ – ಗೋಡಂಬಿ, ¼ ಕಪ್ – ಕಡಲೆಹಿಟ್ಟು, 2 ಟೇಬಲ್ ಸ್ಪೂನ್ – ಅಕ್ಕಿ ಹಿಟ್ಟು, ½ ಟೀ ಸ್ಪೂನ್ – ಅರಿಶಿನ ಪುಡಿ, 1 ಟೀ ಸ್ಪೂನ್ – ಖಾರದ ಪುಡಿ, ½ ಟೀಸ್ಪೂನ್ – ಚಾಟ್ ಮಸಾಲ, ಇಂಗು – ಚಿಟಿಕೆ, 3 – ಟೇಬಲ್ ಸ್ಪೂನ್ – ನೀರು, ½ ಟೀ ಸ್ಪೂನ್ – ಉಪ್ಪು, ಎಣ್ಣೆ – ಕರಿಯಲು ಬೇಕಾಗುವಷ್ಟು.
ಮಾಡುವ ವಿಧಾನ:
ಮೊದಲಿಗೆ ಒಂದು ಬೌಲ್ ಗೆ ಗೋಡಂಬಿ, ಕಡಲೆಹಿಟ್ಟು, ಅಕ್ಕಿ ಹಿಟ್ಟು, ಅರಿಶಿನ, ಖಾರದ ಪುಡಿ, ಚಾಟ್ ಮಸಾಲ, ಇಂಗು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ 2 ಟೇಬಲ್ ಸ್ಪೂನ್ ನೀರು ಸೇರಿಸಿ ಮಿಕ್ಸ್ ಮಾಡಿ.
ಈ ಮಿಶ್ರಣ ಸ್ವಲ್ಪ ದಪ್ಪಗೆ ಇರಲಿ. ನಂತರ ಗ್ಯಾಸ್ ಮೇಲೆ ಎಣ್ಣೆ ಬಾಣಲೆ ಇಟ್ಟು ಅದು ಕಾಯುತ್ತಿದ್ದಂತೆ ಕಡಲೆಹಿಟ್ಟಿನಿಂದ ಮಿಶ್ರಿತವಾದ ಗೋಡಂಬಿಯನ್ನು ಒಂದೊಂದೆ ಹಾಕಿ ಹೊಂಬಣ್ಣ ಬರುವವರೆಗೆ ಕರಿಯಿರಿ. ರುಚಿಕರವಾದ ಮಸಾಲ ಗೋಡಂಬಿ ಫ್ರೈ ಸವಿಯಲು ಸಿದ್ಧ.