ಚುಮು ಚುಮು ಚಳಿಗೆ ಸಂಜೆ ವೇಳೆ ಏನಾದರೂ ಗರಿಗರಿಯಾದ್ದು ತಿನ್ನಬೇಕು ಅನಿಸುತ್ತದೆ. ಮನೆಯ ಡಬ್ಬಿಯಲ್ಲಿ ಕಡಲೆಬೇಳೆ ಇದ್ದರೆ ರುಚಿಕರವಾದ ಮಸಾಲೆ ವಡಾವನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು.
ರುಚಿಕರವಾದ ಈ ವಡೆ ಸಂಜೆ ಟೀ ಸಮಯಕ್ಕೆ ಹೇಳಿ ಮಾಡಿಸಿದ ಸ್ನ್ಯಾಕ್ಸ್
1ಕಪ್ ಕಡಲೇಬೇಳೆ 2 ಸಲ ತೊಳೆದು 2 ಗಂಟೆಗಳ ಕಾಲ ನೆನೆಸಿಡಿ. 2 ಈರುಳ್ಳಿ ಸಣ್ನಗೆ ಹೆಚ್ಚಿದ್ದು. 1 ಟೇಬಲ್ ಸ್ಪೂನ್ ಅಕ್ಕಿಹಿಟ್ಟು, ಕೊತ್ತಂಬರಿಸೊಪ್ಪು 1 ಟೇಬಲ್ ಸ್ಪೂನ್ ನಷ್ಟು, ಕರಿಬೇವು-1 ಟೇಬಲ್ ಸ್ಪೂನ್ ನಷ್ಟು. ಶುಂಠಿ ಅರ್ಧ ಇಂಚು, ಬೆಳುಳ್ಳಿ-2 ಎಸಳು ಜೀರಿಗೆ 1 ಟಿಸ್ಪೂನ್ ನಷ್ಟು, ಈರುಳ್ಳಿ-ಸಣ್ಣದ್ದು , ಹಸಿಮೆಣಸು -3, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಸ್ವಲ್ಪ ಕೊತ್ತಂಬರಿಸೊಪ್ಪು, ಜೀರಿಗೆ, ಸ್ವಲ್ಪ ಈರುಳ್ಳಿ ಹಾಕಿ ರುಬ್ಬಿಕೊಳ್ಳಿ. ನಂತರ ನೆನೆಸಿಟ್ಟುಕೊಂಡ ಕಡಲೇಬೇಳೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣಕ್ಕೆ ಈರುಳ್ಳಿ, ಕರಿಬೇವು, ಕೊತ್ತಂಬರಿಸೊಪ್ಪು, ಅಕ್ಕಿಹಿಟ್ಟು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ತಯಾರಿಸಿಕೊಳ್ಳಿ. ಕಾದ ಎಣ್ಣೆಯಲ್ಲಿ ಕರಿದರೆ ರುಚಿ ರುಚಿಯಾದ ಮಸಾಲೆ ವಡೆ ಸವಿಯಲು ಸಿದ್ಧ.