ಪಾಲಕ್ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಲವು ಮಕ್ಕಳು ಸೊಪ್ಪು ತಿನ್ನುವುದಕ್ಕೆ ಕೇಳುವುದಿಲ್ಲ. ಅಂತಹ ಮಕ್ಕಳಿಗೆ ಪಾಲಕ್ ಸೊಪ್ಪಿನಿಂದ ದೋಸೆ ಮಾಡಿ ಕೊಡಿ.
ಬೇಕಾಗುವ ಸಾಮಗ್ರಿಗಳು:
ಪಾಲಕ್-3 ಕಪ್ ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ, ಹಸಿಮೆಣಸು-2. ಶುಂಠಿ-1 ಇಂಚು, ಅರಿಶಿನ-1/2 ಟೀ ಸ್ಪೂನ್, ಸಕ್ಕರೆ-1 ಟೀ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು, ನೀರು-ಅಗತ್ಯವಿರುವಷ್ಟು, ಎಣ್ಣೆ-ಸ್ವಲ್ಪ.
ಮಾಡುವ ವಿಧಾನ:
ಮೊದಲಿಗೆ ಪಾಲಕ್ ಎಲೆಗಳನ್ನು ಚೆನ್ನಾಗಿ ತೊಳೆದು ಕತ್ತರಿಸಿಟ್ಟುಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 2 ಕಪ್ ನೀರು ಹಾಕಿ ನಂತರ ಅರಿಶಿನ, ಸಕ್ಕರೆ ಸೇರಿಸಿ ಪಾಲಕ್ ಹಾಕಿ 2 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಪಾಲಕ್ ಅನ್ನು ತೆಗೆದುಕೊಂಡು ಅದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಹಸಿಮೆಣಸು, ಶುಂಠಿ ಹಾಕಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಂಡು ಒಂದು ಪಾತ್ರೆಗೆ ತೆಗೆದುಕೊಳ್ಳಿ.
ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿಕೊಂಡು ಸೌಟಿನ ಸಹಾಯದಿಂದ ದೋಸೆ ಹಿಟ್ಟು ಹಾಕಿ ತೆಳುವಾಗಿ ದೋಸೆ ಮಾಡಿ. ಚಟ್ನಿ ಜತೆ ಸವಿಯಿರಿ.