ಸಿರಿ ಧಾನ್ಯಗಳಿಂದ ತಯಾರಿಸುವ ಅಡುಗೆ ರುಚಿಯೂ ಹೌದು ಆರೋಗ್ಯದಾಯಕವೂ ಕೂಡಾ. ಸಿರಿ ಧಾನ್ಯ ನವಣೆಯಿಂದ ತಯಾರಿಸುವ ಪಾಯಸದ ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು : ನವಣೆ- 1 ಕಪ್, ತುಪ್ಪ- 4 ಚಮಚ, ಗೋಡಂಬಿ, ದ್ರಾಕ್ಷಿ, ಜಾಕಾಯಿ ಮತ್ತು ಲವಂಗದ ಪುಡಿ ಸ್ವಲ್ಪ, ಬೆಲ್ಲದ ಪುಡಿ- 1/2 ಕಪ್, ಹಾಲು- 5 ಕಪ್.
ಮಾಡುವ ವಿಧಾನ : ಶುಚಿಗೊಳಿಸಿದ ನವಣೆಯನ್ನು 2 ಚಮಚ ತುಪ್ಪ ಹಾಕಿ ಹುರಿಯಿರಿ. ಕುಕ್ಕರ್ ಗೆ ಹುರಿದ ನವಣೆ ಮತ್ತು ಕಾಯಿಸಿದ ಹಾಲು ಬೆರೆಸಿ 3 ವಿಷಲ್ ಕೂಗಿಸಿ. ಬೆಲ್ಲದ ಪುಡಿಗೆ ಸ್ವಲ್ಪ ನೀರು ಬೆರೆಸಿ ಪಾಕ ತಯಾರಿಸಿ. ಬೆಂದ ನವಣೆಗೆ ಬೆರೆಸಿ ಕುದಿಸಿ. ಲವಂಗದ ಪುಡಿ ಬೆರೆಸಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಹಾಕಿ ಕೆಳಗಿಳಿಸಿ. ಈಗ ರುಚಿಯಾದ ನವಣೆ ಪಾಯಸ ರೆಡಿ.