ಸಂಜೆ ಸಮಯಕ್ಕೆ ಬಿಸಿ ಬಿಸಿಯಾದ ಟೊಮೆಟೊ ಸೂಪ್ ಮಾಡಿಕೊಂಡು ಕುಡಿಯುತ್ತಿದ್ದರೆ ಅದರ ಮಜಾವೇ ಬೇರೆ. ರುಚಿಕರವಾದ ಟೊಮೆಟೊ ಸೂಪ್ ಮಾಡಿಕೊಂಡು ಕುಡಿಯುವ ವಿಧಾನ ಇಲ್ಲಿದೆ ನೋಡಿ.
5 ಟೊಮೆಟೊಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಎರಡು ಭಾಗ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 1 ಟೀ ಸ್ಪೂನ್ ಎಣ್ಣೆ ಹಾಕಿ 5 ಕಾಳು ಕಾಳು ಮೆಣಸು, 1/ 2 ಟೇಬಲ್ ಸ್ಪೂನ್ ಕೊತ್ತಂಬರಿ ಬೀಜ, 1 ಟೇಬಲ್ ಸ್ಪೂನ್ ಜೀರಿಗೆ, ಚಿಕ್ಕ ಪೀಸ್ ಚಕ್ಕೆ, 1 ಏಲಕ್ಕಿ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ನಂತರ 1/4 ಕಪ್ ಈರುಳ್ಳಿ, 4 ಎಸಳು ಬೆಳ್ಳುಳ್ಳಿ, 2 ಟೇಬಲ್ ಸ್ಪೂನ್ ಶುಂಠಿ ತುರಿ, ಚಿಕ್ಕದ್ದಾಗಿ ಕತ್ತರಿಸಿಕೊಂಡು ಕ್ಯಾರೆಟ್ ಪೀಸ್ 2 ಟೇಬಲ್ ಸ್ಪೂನ್ ಹಾಕಿ ಫ್ರೈ ಮಾಡಿಕೊಳ್ಳಿ.
ನಂತರ ¾ ಟೇಬಲ್ ಸ್ಪೂನ್ ಖಾರದ ಪುಡಿ ಹಾಕಿ ನಂತರ ಟೊಮೆಟೊ ಹಾಕಿ ಸ್ವಲ್ಪ ಉಪ್ಪು, 2 ಟೇಬಲ್ ಸ್ಪೂನ್ ನೀರು ಹಾಕಿ ಮಿಕ್ಸ್ ಮಾಡಿಕೊಂಡು ಒಂದು ಮುಚ್ಚಳ ಮುಚ್ಚಿ. ನಂತರ 10 ನಿಮಿಷಗಳ ನಂತರ ಅದಕ್ಕೆ 2 ಕಪ್ ನೀರು ಹಾಕಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಮತ್ತೊಮ್ಮೆ 20 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
ಬೆಂದ ಟೊಮೆಟೊ ಮಿಶ್ರಣವನ್ನು ಶೋಧಿಸಿಕೊಳ್ಳಿ. ಶೋಧಿಸಿಕೊಳ್ಳುವಾಗ ಟೊಮೆಟೊ ಕ್ಯಾರೆಟ್ ಮಿಶ್ರಣವನ್ನು ಒಂದು ಚಮಚದ ಸಹಾಯದಿಂದ ಒತ್ತಿಕೊಳ್ಳಿ. ನಂತರ ಶೋಧಿಸಿದ ಸೂಪ್ ಅನ್ನು ಒಂದು ಪ್ಯಾನ್ ಗೆ ಹಾಕಿಕೊಂಡು ಅದಕ್ಕೆ ಸ್ವಲ್ಪ ಉಪ್ಪು ಹಾಕಿಕೊಂಡು ಮತ್ತೊಮ್ಮೆ ಕುದಿಸಿಕೊಳ್ಳಿ ನಂತರ ಸರ್ವ್ ಮಾಡಿ.