ಬೇಕಾಗುವ ಸಾಮಾಗ್ರಿಗಳು:
ಗೋಧಿ ಹಿಟ್ಟು – 1 ಕಪ್, ಸಕ್ಕರೆ – 1 ಕಪ್, ತುಪ್ಪ – 1 ಕಪ್.
ಮಾಡುವ ವಿಧಾನ:
ಸ್ಟೌ ಮೇಲೆ ಒಂದು ಬಾಣಲೆಯಿಟ್ಟು 1 ಕಪ್ ಸಕ್ಕರೆಗೆ 2 ಕಪ್ ನೀರು ಹಾಕಿ ಕುದಿಯಲು ಬಿಡಿ. ಸಕ್ಕರೆ ಕರಗಿದ ಬಳಿಕ ಇದನ್ನು ಪಕ್ಕಕ್ಕಿಟ್ಟು, ಇನ್ನೊಂದು ಬಾಣಲೆಗೆ 1 ಕಪ್ ತುಪ್ಪ ಹಾಕಿ ಅದಕ್ಕೆ 1 ಕಪ್ ಗೋಧಿ ಹಿಟ್ಟು ಹಾಕಿ ಚೆನ್ನಾಗಿ ಹುರಿಯಿರಿ. 15 ನಿಮಿಷ ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ. ಬಣ್ಣ ಬದಲಾದಾಗ ಮಿಕ್ಸ್ ಮಾಡುತ್ತಲೇ ಮಾಡಿಟ್ಟಿರುವ ಸಕ್ಕರೆ ಪಾಕ ಹಾಕುತ್ತಾ ಕಲಸಿಕೊಳ್ಳಿ.
ಪಾಕ ಗಟ್ಟಿಯಾಗುತ್ತಾ ಬರುವವರೆಗೂ ಚೆನ್ನಾಗಿ ಮಿಕ್ಸ್ ಮಾಡಿ. ಗಟ್ಟಿಯಾದಾಗ ಸರ್ವಿಂಗ್ ಪ್ಲೇಟ್ ಗೆ ಹಾಕಿದರೆ ರುಚಿಕರವಾದ ಗೋಧಿ ಹಲ್ವಾ ರೆಡಿ. ಬೇಕಿದ್ದರೆ ದ್ರಾಕ್ಷಿ, ಗೋಡಂಬಿ ಸೇರಿಸಿ.