ಭಾಸುಮತಿ ರೈಸ್-2 ಕಪ್, ತುಪ್ಪ-1/4 ಕಪ್, ಈರುಳ್ಳಿ-2 ದೊಡ್ಡದ್ದು, ನೀರು-4 ಕಪ್, ಚಕ್ಕೆ-ಚಿಕ್ಕ ತುಂಡು, ಲವಂಗ-2, ಕಾಳುಮೆಣಸು-6, ಏಲಕ್ಕಿ-1, ಜಾಯಿಕಾಯಿ-ಚಿಕ್ಕ ಪೀಸ್, ಬೆಳ್ಳುಳ್ಳಿ-5 ಎಸಳು, ಧನಿಯಾ -1 ಟೀ ಸ್ಪೂನ್, ಶುಂಠಿ-ಚಿಕ್ಕ ತುಂಡು, ತೆಂಗಿಕಾಯಿ ತುರಿ-2 ಟೇಬಲ್ ಸ್ಪೂನ್, ಹಸಿಮೆಣಸು-4, ಹುಣಸೆಹಣ್ಣು-ನೆಲ್ಲಿಕಾಯಿ ಗಾತ್ರದ್ದು.
ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು 20 ನಿಮಿಷಗಳ ಕಾಲ ನೆನೆಸಿಡಿ. ಒಂದು ಮಿಕ್ಸಿ ಜಾರಿಗೆ ಚಕ್ಕೆ, ಏಲಕ್ಕಿ, ಲವಂಗ, ಹಸಿಮೆಣಸು, ಧನಿಯಾ, ಶುಂಠಿ, ಬೆಳ್ಳುಳ್ಳಿ, ಜಾಯಿಕಾಯಿ, ಹುಣಸೆಹಣ್ಣು, ತೆಂಗಿನಕಾಯಿ ತುರಿ, ಕಾಳುಮೆಣಸು ಸೇರಿಸಿ ತುಸು ನೀರು ಹಾಕಿ ರುಬ್ಬಿಕೊಳ್ಳಿ.
ಗ್ಯಾಸ್ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ತುಪ್ಪ ಹಾಕಿ ಇದಕ್ಕೆ ಕತ್ತರಿಸಿದ ಈರುಳ್ಳಿ ಸೇರಿಸಿ ಫ್ರೈ ಮಾಡಿ. ನಂತರ ರುಬ್ಬಿದ ಮಸಾಲೆ ಸೇರಿಸಿ ಫ್ರೈ ಮಾಡಿ. ಇದು ಪರಿಮಳ ಬರುತ್ತಿದ್ದಂತೆ ನೀರು ಹಾಕಿ ಕುದಿಯಲು ಇಡಿ. ಇದು ಕುದಿ ಬರುತ್ತಿದ್ದಂತೆ ಅಕ್ಕಿ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮುಚ್ಚಳ ಮುಚ್ಚಿ 2 ವಿಷಲ್ ಕೂಗಿಸಿಕೊಳ್ಳಿ.