ಕೆಲವರಿಗೆ ರೈಸ್ ಬಾತ್ ಎಂದರೆ ತುಂಬಾ ಇಷ್ಟ. ಕಾರ್ನ್ ಇಷ್ಟಪಡುವವರು ಇದರಿಂದ ರುಚಿಕರವಾದ ರೈಸ್ ಬಾತ್ ಮಾಡಿ ಸವಿಯಿರಿ. ಸುಲಭವಾಗಿ ಮಾಡಬಹುದು.
ಬೇಕಾಗುವ ಸಾಮಗ್ರಿಗಳು:
ಬೇಯಿಸಿದ ಅನ್ನ-1 ಕಪ್, ಎಣ್ಣೆ-3 ಟೇಬಲ್ ಸ್ಪೂನ್, ಜೀರಿಗೆ-1 ಟೀ ಸ್ಪೂನ್, ಈರುಳ್ಳಿ-1 ಕತ್ತರಿಸಿದ್ದು, ಟೊಮೆಟೊ-3 ಕತ್ತರಿಸಿದ್ದು, ಪಾವ್ ಭಾಜಿ ಮಸಾಲ-3 ಟೇಬಲ್ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು, ಸ್ವೀಟ್ ಕಾರ್ನ್-1 ಕಪ್, ಕೊತ್ತಂಬರಿಸೊಪ್ಪು-1 ಹಿಡಿ.
ಮಾಡುವ ವಿಧಾನ:
ಒಂದು ಪ್ಯಾನ್ ನಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಜೀರಿಗೆ ಹಾಕಿ ಅದು ಸಿಡಿದಾಗ ಈರುಳ್ಳಿ ಹಾಕಿ 2 ನಿಮಿಷಗಳ ಕಾಲ ಕೈಯಾಡಿಸಿ, ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಟೊಮೆಟೊ ಸೇರಿಸಿ ಮೆತ್ತಗಾಗುವವರೆಗೆ ಚೆನ್ನಾಗಿ ಬೇಯಿಸಿಕೊಳ್ಳಿ.
ಇದಕ್ಕೆ ಪಾವ್ ಭಾಜಿ ಮಸಾಲ, ಉಪ್ಪು, ಕಾರ್ನ್ ಸೇರಿಸಿ ಮಿಕ್ಸ್ ಮಾಡಿ 4 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಬೇಯಿಸಿದ ಅನ್ನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸರ್ವ್ ಮಾಡಿ.