alex Certify ರಿಸ್ಕ್‌ ಇಲ್ಲದ ಹೂಡಿಕೆಗಾಗಿ ʼಪೋಸ್ಟ್‌ ಆಫೀಸ್‌ʼ ನಲ್ಲಿದೆ ಇಂಥಾ ವಿಶಿಷ್ಟ ಯೋಜನೆ; ಉತ್ತಮ ಬಡ್ಡಿ ಜೊತೆಗೆ ಸಿಗುತ್ತೆ ತೆರಿಗೆ ವಿನಾಯಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಸ್ಕ್‌ ಇಲ್ಲದ ಹೂಡಿಕೆಗಾಗಿ ʼಪೋಸ್ಟ್‌ ಆಫೀಸ್‌ʼ ನಲ್ಲಿದೆ ಇಂಥಾ ವಿಶಿಷ್ಟ ಯೋಜನೆ; ಉತ್ತಮ ಬಡ್ಡಿ ಜೊತೆಗೆ ಸಿಗುತ್ತೆ ತೆರಿಗೆ ವಿನಾಯಿತಿ

ಪೋಸ್ಟ್‌ ಆಫೀಸ್‌ನ ಬಹುತೇಕ ಎಲ್ಲ ಯೋಜನೆಗಳೂ ಗ್ರಾಹಕರಿಗೆ ಅತಿ ಹೆಚ್ಚು ಲಾಭದಾಯಕವಾಗಿವೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಸ್ಥಿರ ಆದಾಯ ಹೂಡಿಕೆ ಯೋಜನೆ ಕೂಡ ಇವುಗಳಲ್ಲೊಂದು. ನಿಮ್ಮ ಹಣವನ್ನು ಅಪಾಯ ಮುಕ್ತ ಸ್ಥಳದಲ್ಲಿ ಹೂಡಿಕೆ ಮಾಡುವ ಜೊತೆಗೆ ಸ್ಥಿರ ಆದಾಯ ಗಳಿಸಲು ಇದು ಉತ್ತಮ ಯೋಜನೆಯಾಗಿದೆ. ಇದು ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಿದೆ. ಈ ಯೋಜನೆ ಅಂಚೆ ಕಛೇರಿಯ ಉಳಿತಾಯ ಯೋಜನೆಗಳ ಭಾಗವಾಗಿದೆ.

ಈ ಸ್ಕೀಮ್‌ ಐದು ವರ್ಷಗಳ ಲಾಕ್ ಇನ್ ಅವಧಿಯನ್ನು ಹೊಂದಿದೆ. ಅಂದರೆ ಐದು ವರ್ಷಗಳ ಮೊದಲು ನೀವು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಹೂಡಿಕೆ ಮಾಡಲು ಇಲ್ಲಿ ಮೂರು ಆಯ್ಕೆಗಳಿವೆ. ನೀವು ಯಾವುದೇ ಪೋಸ್ಟ್ ಆಫೀಸ್ ಶಾಖೆಯಲ್ಲಿ ಇದನ್ನು ತೆರೆಯಬಹುದು.

ಹೂಡಿಕೆ ಮಾಡುವುದು ಹೇಗೆ ?

ಏಕ ವಿಧ – NSCಯ ಏಕ ಪ್ರಕಾರದ ಯೋಜನೆಯ ಮೂಲಕ ನಿಮ್ಮ ಹೆಸರಲ್ಲಿ ಅಥವಾ ನಿಮ್ಮ ಮಗುವಿನ ಹೆಸರಲ್ಲಿ ಹೂಡಿಕೆ ಮಾಡಬಹುದು. ಜಾಯಿಂಟ್ ಎ ಟೈಪ್ – ಈ ರೀತಿಯ ಪ್ರಮಾಣಪತ್ರವನ್ನು ಇಬ್ಬರು ಒಟ್ಟಿಗೆ ಖರೀದಿಸಬಹುದು. ಇಬ್ಬರು ಒಟ್ಟಾಗಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಮೆಚ್ಯೂರಿಟಿಯ ಸಮಯದಲ್ಲಿ, ಉಳಿತಾಯ ಯೋಜನೆಯಿಂದ ಮೊತ್ತವನ್ನು ಹಿಂಪಡೆಯಲು ಇಬ್ಬರೂ ಹಾಜರಿರಬೇಕಾಗುತ್ತದೆ. ಜಾಯಿಂಟ್ ಬಿ ಟೈಪ್ – ಈ ಸ್ಕೀಮ್‌ನಲ್ಲಿ ಇಬ್ಬರು ಒಟ್ಟಿಗೆ ಹೂಡಿಕೆ ಮಾಡಬಹುದಾದರೂ, ಅವಧಿ ಮುಕ್ತಾಯದ ಸಮಯದಲ್ಲಿ ಒಬ್ಬರಿಗೆ ಮಾತ್ರ ಮೊತ್ತವನ್ನು ನೀಡಲಾಗುತ್ತದೆ.

ನೀವು ಎಷ್ಟು ಹೂಡಿಕೆ ಮಾಡಬಹುದು ?

ಈ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಪ್ರಾರಂಭಿಸಲು ಕನಿಷ್ಠ ಮೊತ್ತ  1000 ರೂಪಾಯಿ. ನೀವು 1 ಲಕ್ಷ ರೂಪಾಯಿವರೆಗೂ ಇದನ್ನು ಹೆಚ್ಚಿಸಬಹುದು. ಆದರೆ ಯೋಜನೆಗೆ ಯಾವುದೇ ಗರಿಷ್ಠ ಮಿತಿಯಿಲ್ಲ. ಗ್ರಾಹಕರಿಗೆ ಶೇ.6.8ರಷ್ಟು ಬಡ್ಡಿ ಸಿಗುತ್ತದೆ. ನೀವು NSC ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ. 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ನಿಮ್ಮ ಹೂಡಿಕೆಯು ತೆರಿಗೆಗೆ ಒಳಪಡುವ ಆದಾಯವಾಗಿದ್ದರೆ, ನಿಗದಿತ ದರಗಳ ಪ್ರಕಾರ ಹೂಡಿಕೆಯ ಒಟ್ಟು ಮೊತ್ತದಿಂದ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...