
ಅದರಲ್ಲೂ ಅವರ ಜಾತಿ ಕುರಿತಂತೆ ಹೆಚ್ಚು ಗೂಗಲ್ ಮಾಡಿದ್ದಾರಂತೆ. ಗೂಗಲ್ ನಲ್ಲಿ ರಿಷಿ ಬೀಫ್ ತಿಂತಾರಾ, ರಿಷಿ ಅವರ ಜಾತಿ ಯಾವುದು ಹೀಗೆ ಅವರ ಬಗ್ಗೆ ಅನೇಕ ವೈಯಕ್ತಿಕ ವಿಚಾರಗಳ ಬಗ್ಗೆ ಹುಡುಕಿದ್ದಾರೆ ಎನ್ನಲಾಗಿದೆ. ಈ ಕುರಿತು ಬೂಮ್ ಲೈವ್ ವರದಿ ಮಾಡಿದೆ. ಇನ್ನು ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಬಿಹಾರದಲ್ಲಿ ಈ ಬಗ್ಗೆ ಹೆಚ್ಚು ಸರ್ಚ್ ಮಾಡಲಾಗಿದೆ.
ರಿಷಿ ಸುನಕ್ ಅವರು ಗೋ ಪೂಜೆ ಮಾಡುವವರು ಹಾಗಾಗಿ ಗೋಮಾಂಸ ತಿನ್ನಲ್ಲ ಎಂದು ಕೆಲವರು ಕಮೆಂಟ್ ಮಾಡಿರೋದು ಕೂಡ ಇದೆ. ಒಟ್ನಲ್ಲಿ ಒಬ್ಬ ವ್ಯಕ್ತಿ ಉನ್ನತ ಹುದ್ದೆಗೇರಿದಾಗ ಹೀಗೆ ಸರ್ಚ್ ಮಾಡೋದು ಕಾಮನ್. ಅದೇ ರೀತಿ ಸುನಕ್ ವಿಚಾರದಲ್ಲೂ ಆಗಿದೆ. ಅವರ ವೈಯಕ್ತಿಕ ವಿಚಾರ ತಿಳಿಯಲು ಅನೇಕರು ಆಸಕ್ತರಾಗಿದ್ದಾರೆ ಅನ್ನೋದು ವಿಶೇಷ.