ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಮುಂಬರುವ ಟಿ20 ವಿಶ್ವಕಪ್ ಗಾಗಿ ಆಸ್ಟ್ರೇಲಿಯಾದಲ್ಲಿದ್ದಾರೆ. ಕಾಕತಾಳೀಯ ಎಂಬಂತೆ ಊರ್ವಶಿ ರೌಟೇಲ ಕೂಡ ಅಲ್ಲಿಗೆ ತೆರಳಿದ್ದು, ಇವರಿಬ್ಬರ ಕುರಿತಾಗಿನ ಗಾಸಿಪ್ ಈಗ ಮತ್ತಷ್ಟು ಜೋರಾಗಿದೆ. ಇದು ಸಾಲದೆಂಬಂತೆ ಊರ್ವಶಿ ರೌಟೇಲ ಫೋಟೋ ಒಂದನ್ನು ಹಾಕಿ ನಾನು ಎಲ್ಲಿದ್ದೇನೆ ಗೆಸ್ ಮಾಡಿ ಎಂದು ಪ್ರಶ್ನೆ ಹಾಕಿದ್ದಾರೆ.
ಈಗಾಗಲೇ ಬಹಳ ದಿನಗಳಿಂದ ರಿಷಬ್ ಪಂತ್ ಹಾಗೂ ಊರ್ವಶಿ ರೌಟೇಲ ನಡುವೆ ಕುಚ್ ಕುಚ್ ನಡೆಯುತ್ತಿದೆ ಎಂಬ ಗುಸುಗುಸು ಹರಿದಾಡುತ್ತಲೇ ಇದ್ದು, ಆದರೆ ಇದನ್ನು ರಿಷಬ್ ಪಂತ್ ತಳ್ಳಿ ಹಾಕುತ್ತಲೇ ಬಂದಿದ್ದರು. ಆದರೆ ಊರ್ವಶಿ ಮಾತ್ರ ರಿಷಬ್ ಬೆನ್ನು ಬಿಡುವಂತೆ ಕಾಣುತ್ತಿಲ್ಲ.
ಹೀಗಾಗಿ ಆಸ್ಟ್ರೇಲಿಯಾದ ಪರ್ತ್ ನಿಂದ ಫೋಟೋ ಹಾಕಿ ಗೆಸ್ ಮಾಡುವಂತೆ ಅಭಿಮಾನಿಗಳಿಗೆ ಊರ್ವಶಿ ರೌಟೇಲ ಕೇಳಿದ್ದಾರೆ. ಇದಕ್ಕೆ ಅಭಿಮಾನಿಗಳು ಸಹ ತರಹೇವಾರಿ ಕಾಮೆಂಟ್ ಹಾಕಿದ್ದರೆ ಓರ್ವ ಮಾತ್ರ, ಊರ್ವಶಿ ರೌಟೇಲ, ರಿಷಬ್ ಪಂತ್ ಅವರನ್ನು ಅನುಸರಿಸುವಂತೆ ನಿಮ್ಮನ್ನು ಅನುಸರಿಸುವವರನ್ನು ಹುಡುಕಿ ಎಂದು ಬರೆದುಕೊಂಡಿದ್ದಾರೆ.