ಐದು ಬಾಗಿಲಿನ ಮಹಿಂದ್ರಾ ಥಾರ್ ಬಗ್ಗೆ ಎಲ್ಲರಲ್ಲೂ ಕುತೂಹಲ ಇದ್ದೇ ಇದೆ. ಥಾರ್‌ನ ಲುಕ್ ಈಗ ರಿವೀಲ್ ಆಗಿದೆ, ಕೆಲವು ಫೋಟೋಗಳು ವೈರಲ್ ಆಗಿದ್ದು ಅದರ ವಿಶೇಷತೆಗಳಂತೂ ಸಖತ್ ಇಂಟ್ರೆಸ್ಟಿಂಗ್ ಆಗಿವೆ. ಲೋಹ ಅಥವಾ ಪ್ಲಾಸ್ಟಿಕ್ ಹಾರ್ಡ್ ಟಾಪ್ ಈ ಕಾರಿಗಿದೆ, ಇದನ್ನು ತೆಗೆಯಲೂಬಹುದು. ಕ್ಯಾಬಿನ್ ಒಳಗೆ A-ಪಿಲ್ಲರ್ ಮೇಲೆ ಗ್ರ್ಯಾಬ್ ಹ್ಯಾಂಡಲ್ ಮತ್ತು ಸ್ಕ್ವೇರ್ಡ್ ಆಫ್ ವೀಲ್ ಆರ್ಚ್‌ಗಳನ್ನು ಅಳವಡಿಸಲಾಗಿದೆ.
3 ಡೋರ್ ಥಾರ್‌ನಂತೆಯೇ ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಿಂದ ಇದು ಕೂಡ ಚಾಲಿತವಾಗುತ್ತದೆ. ಆದರೆ ಟ್ಯೂನ್ ಪರಿಷ್ಕೃತ ಸ್ಥಿತಿಯಲ್ಲಿದೆ. 2023ರಲ್ಲಿ 5 ಡೋರ್ ಥಾರ್ ರಸ್ತೆಗಿಳಿಯಲಿದೆ. ಈ ಕಾರಿನ ಉದ್ದ ಹೆಚ್ಚಿದ್ದು, ವ್ಹೀಲ್‌ಬೇಸ್ ಅನ್ನು ಗಮನಿಸಬಹುದು. ಮಿಶ್ರಲೋಹದ ಚಕ್ರಗಳನ್ನು ಇದು ಹೊಂದಿದೆ. ಸಾಫ್ಟ್ ಟಾಪ್ ಆಯ್ಕೆಯನ್ನು ಸಂಪೂರ್ಣವಾಗಿ ಸ್ಕಿಪ್ ಮಾಡಿದಂತೆ ತೋರುತ್ತಿದೆ.
3 ಡೋರ್ ಥಾರ್‌ನಂತೆ ಅದೇದೇ ರೀತಿಯ ಡ್ಯಾಶ್‌ಬೋರ್ಡ್ ವಿನ್ಯಾಸ ಹಾಗೂ ಇತರ ಸಾಮ್ಯತೆಗಳನ್ನು ಇದು ಒಳಗೊಂಡಿದೆ. ದೊಡ್ಡದಾದ ಟಚ್‌ಸ್ಕ್ರೀನ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಕೆಲವು ಹೊಸ ವೈಶಿಷ್ಟ್ಯಗಳೊಂದಿಗೆ ಲಾಂಗ್-ವೀಲ್‌ಬೇಸ್ ಥಾರ್ ಆಕರ್ಷಕವೆನಿಸಿದೆ. 3 ಡೋರ್ ಥಾರ್‌ನಲ್ಲಿ 2-ಲೀಟರ್ ಟರ್ಬೊ-ಪೆಟ್ರೋಲ್ 150PS ಅನ್ನು ಅಳವಡಿಸಲಾಗಿದೆ. ಡೀಸೆಲ್ 130PS ಅನ್ನು ಉತ್ಪಾದಿಸುತ್ತದೆ. ಇದು 2WD ರೂಪಾಂತರಗಳ ಆಯ್ಕೆಯನ್ನು ಪಡೆಯಬಹುದು. ಇದರಲ್ಲಿ ಡ್ರಮ್ ಬ್ರೇಕ್‌ಗಳಿವೆ. ಇದು ಮುಂಬರುವ ಫೋರ್ಸ್ ಗೂರ್ಖಾ ಮತ್ತು ಮಾರುತಿ ಸುಜುಕಿ ಜಿಮ್ನಿಯ 5 ಡೋರ್ ಆವೃತ್ತಿಗಳೊಂದಿಗೆ ಸ್ಪರ್ಧಿಸಲಿದೆ.