ಕೆಜಿಎಫ್ ಚಾಪ್ಟರ್-2 ಅಂದಾಕ್ಷಣ.. ಈ ಸಿನೆಮಾದ ಒಂದೊಂದು ಫ್ರೇಮ್ ಕಣ್ಣೆದುರು ಬಂದು ಬಿಡುತ್ತೆ. ಕಿವಿಯಲ್ಲಿ ಈ ಸಿನೆಮಾದ ಮ್ಯೂಜಿಕ್. ಇನ್ನೂ ಕೂಡಾ ಯಾರೂ ಕೆ.ಜಿ.ಎಫ್ ಚಾಪ್ಟರ್-2 ಹ್ಯಾಂಗ್ವೋವರ್ನಿಂದ ಹೊರಗೆ ಬಂದೇ ಇಲ್ಲ. ಎಪ್ರಿಲ್ 14 ರಂದು ತೆರೆಕಂಡ ಈ ಸಿನೆಮಾ ಈಗಾಗಲೇ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ದಾಖಲೆಗಳನ್ನ ಮಾಡಿದೆ.
ಬೇರೆ-ಬೇರೆ ಭಾಷೆಗಳಲ್ಲಿ ತೆರೆಕಂಡಿರೋ ಈ ಸಿನೆಮಾ ಹೊಸ ಹೊಸ ರೆಕಾರ್ಡ್ ಸೃಷ್ಟಿಸಿದೆ. ಕೆಜಿಎಫ್ ಚಾಪ್ಟರ್-2 ರಿಲೀಸ್ ಆದ ನಂತರವೂ ಅನೇಕ ಸಿನೆಮಾಗಳು ಬಂದರೂ ರಾಕಿಭಾಯ್ ಕ್ರೇಜ್ ಮಾತ್ರ ಕಡಿಮೆ ಆಗ್ತಿಲ್ಲ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನೆಮಾ, ವಿಶ್ವದಾದ್ಯಂತ ತೆರೆಕಂಡ ಮೇಲೆ ಇಲ್ಲಿಯವರೆಗೂ 1217.11 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಟ್ರೇಡ್ ರಿಪೋರ್ಟ್ ಪ್ರಕಾರ ಕೆಜಿಎಫ್ ಚಾಪ್ಟರ್-2, ಬೇರೆ ಬೇರೆ ಸಿನೆಮಾಗಳನ್ನ ಹಿಂದಿಕ್ಕಿ ಮುನ್ನುಗ್ಗುತ್ತಾ ಇದೆ. ಈಗಾಗಲೇ ದಳಪತಿ ವಿಜಯ್ ಅಭಿನಯದ ಬೀಸ್ಟ್, ರಾಜಮೌಳಿ ನಿರ್ದೇಶನದ RRR ಸೇರಿದಂತೆ ಅನೇಕ ಸಿನೆಮಾಗಳು ತೆರೆಕಂಡರೂ ರಾಕಿಭಾಯ್ ಓಟಕ್ಕೆ ಮಾತ್ರ ಯಾವುದೇ ಅಡೆತಡೆ ಆಗಲಿಲ್ಲ. ಮನೋಬಲ ವಿಜಯಬಾಲನ್ ಅನ್ನೊ ಟ್ರೇಡ್ ಅನಾಲಿಸ್ಟ್ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಕೆ.ಜಿ.ಎಫ್ ಚಾಪ್ಟರ್-2 ಸಿನೆಮಾದ ಲೆಕ್ಕಾಚಾರವನ್ನ ಬರೆದುಕೊಂಡಿದ್ದಾರೆ.
ಕೆಜಿಎಫ್ ಚಾಪ್ಟರ್-2 ಸಿನೆಮಾ ಜೊತೆಗೆನೇ ರಿಲೀಸ್ ಆಗಿದ್ದ ಸಿನೆಮಾ ವಿಜಯ್ ದಳಪತಿ ನಟನೆಯ ಬೀಸ್ಟ್, ಯಶ್ ಆರ್ಭಟದ ಮುಂದೆ ಸೌಂಡೇ ಕೇಳಿಸಿಲ್ಲ. ಇನ್ನೂ ರಾಜಮೌಳಿ ನಿರ್ದೇಶನದ RRR ಸೇರಿದಂತೆ ಅನೇಕ ಸಿನೆಮಾಗಳು ಬಂದರೂ ಕೆಜಿಎಫ್ ಚಾಪ್ಟರ್-2 ಮುಂದೆ ಯಾವ ಸಿನೆಮಾ ಕೂಡಾ ಹೆಚ್ಚು ಸದ್ದು ಮಾಡಿಲ್ಲ.
ಕುಡಿದ ಅಮಲಿನಲ್ಲಿ ಡಬಲ್ ಡೆಕ್ಕರ್ ಬಸ್ ಚಲಾಯಿಸಿ ಮನೆಗೆ ತಲುಪಿದ ಭೂಪ..!
ಈಗಾಗಲೇ ಕೆಜಿಎಫ್ ಚಾಪ್ಟರ್-2 ವಿಶ್ವಮಾರುಕಟ್ಟೆಯಲ್ಲಿ 1217.11 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನೂ ಮನೋಬಲ ವಿಜಯಬಾಲನ್ ಹೇಳುವ ಪ್ರಕಾರ ಕೆಜಿಎಫ್ ಚಾಪ್ಟರ್-2 1 ರಿಂದ 5ನೇ ವಾರ 1210.53 ಕೋಟಿ ರೂಪಾಯಿ ಗಳಿಸಿದೆ, 6ನೇ ವಾರದಲ್ಲಿಯೂ ಗಳಿಕೆ ಮುಂದುವರೆದಿದೆ.
ರಾಕಿಂಗ್ ಸ್ಟಾರ್ ಯಶ್, ಸಂಜಯ್ ದತ್, ರವೀನಾ ಟಂಡನ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2’ ಈಗಲೂ ಕೂಡ ಉತ್ತಮ ಗಳಿಕೆಯೊಂದಿಗೆ ಮುನ್ನಡೆಯುತ್ತಿದೆ. ಕರ್ನಾಟಕ ಮಾತ್ರವಲ್ಲದೆ, ತೆಲುಗು, ತಮಿಳು, ಬಾಲಿವುಡ್ ಮಾರ್ಕೆಟ್ಗಳಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿ ಮಾಡಿ, ಹವಾ ಎಬ್ಬಿಸಿದೆ.